Bantwala: ಆಟಿ ಅಮಾವಾಸ್ಯೆ ಹಿನ್ನೆಲೆ; ಸಾರ್ವಜನಿಕರಿಗೆ ಆಟಿ ಕಷಾಯ ವಿತರಣೆ
24/07/2025
ಬಂಟ್ವಾಳದ ತುಳುಕೂಟ ಆಶ್ರಯದಲ್ಲಿ ಬಿಸಿ ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಸಹಕಾರದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ಸಾರ್ವಜನಿಕರಿಗೆ ಆಟಿ ಕಷಾಯವನ್ನು ಬಿಸಿ ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನದ ವಠಾರದಲ್ಲಿ ಹಂಚಲಾಯಿತು.
ದೇವಸ್ಥಾನದ ಅರ್ಚಕ ರಘುಪತಿ ಭಟ್ ಅವರು ಪೂಜೆ ನೆರವೇರಿಸಿದ ನಂತರ ಕಷಾಯ ವಿತರಿಸಲಾಯಿತು. ಈ ವೇಳೆ ತುಳುಕೂಟ ಬಂಟ್ವಾಳದ ಅಧ್ಯಕ್ಷ ಸುದರ್ಶನ್ ಜೈನ್, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಿ. ವಿಶ್ವನಾಥ್ ಮೊದಲಾದವರು ಇದ್ದರು.