
Dharmasthala: ಶವ ಹೂತಿರುವ ಪ್ರಕರಣ; ಸ್ನಾನಘಟ್ಟದಲ್ಲಿ ಸ್ಥಳ ಮಹಜರು
28/07/2025
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬ0ಧಿಸಿ ಎಸ್‌ಐಟಿ ತಂಡ ತನಿಖೆ ಮುಂದುವರಿಸಿದ್ದು, ಧರ್ಮಸ್ದಳ ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ದಟ್ಟ ಅರಣ್ಯದಲ್ಲಿ ಪರಿಶೀಲನೆ ನಡೆಸಿದೆ. ಸಾಕ್ಷಿದಾರನನ್ನು ಕರೆದೊಯ್ದಿರುವ ಎಸ್‌ಐಟಿ ತಂಡ ಸ್ಥಳ ಮಹಜರು ನಡೆಸಿದ್ದಾರೆ. ಮಧ್ಯಾಹ್ನದ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಕರೆ ತರಲಾಯಿತು. ಧರ್ಮಸ್ಥಳ ಸ್ನಾನ ಘಟ್ಟ ಸಮೀಪವೇ ಒಂದು ಸ್ಥಳವನ್ನು ದೂರುದಾರ ತೋರಿಸಿದ್ದು, ಬಳಿಕ ಅಲ್ಲೇ ದಟ್ಟ ಅರಣ್ಯದಲ್ಲಿ ಒಂದು ಗಂಟೆಗಳ ಕಾಲ ಮಹಜರು ನಡೆಸಲಾಯಿತು.