Kinnigoli: ಬಾವಿಗೆ ಬಿದ್ದ ಚಿರತೆ ವಿದ್ಯುತ್ ಶಾಕ್ ತಗುಲಿ ಸಾವು; ಪಶುವೈದ್ಯರಿಂದ ಪರಿಶೀಲನೆ
29/07/2025
ಬಾವಿಗೆ ಬಿದ್ದ ಚಿರತೆ ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಘಟನೆ ಮಂಗಳೂರಿನ ಕಿನ್ನಿಗೋಳಿ ಸಮೀಪದ ಮೆನ್ನಬೆಟ್ಟು ಗ್ರಾಮದಲ್ಲಿ ನಡೆದಿದೆ.
ಕಿನ್ನಿಗೋಳಿ ಮುಕ್ಕ ರಸ್ತೆ ಸಮೀಪ ರಾಬರ್ಟ್ ಎಂಬವರ ಮನೆ ಸಮೀಪದ ಬಾವಿಗೆ ಚಿರತೆ ಬಿದ್ದಿತ್ತು, ರಾಬರ್ಟ್ ಅವರು ಮುಂಜಾನೆ ಪಂಪ್ ಆನ್ ಮಾಡುವಾಗ ನೀರು ಬಂದಿರಲಿಲ್ಲ. ಹೀಗಾಗಿ ಬಾವಿ ಕಡೆ ಇಣುಕಿದಾಗ ಚಿರತೆ ಕಂಡು ಬಂದಿತ್ತು. ತಕ್ಷಣ ರಾಬರ್ಟ್ ಅವರು ಪಂಪ್ ಬಂದ್ ಮಾಡಿದ್ದು, ಚಿರತೆ ವಯರ್ ಕಚ್ಚಿ ಸಾವನ್ನಪ್ಪಿದೆ.
ವಿದ್ಯುತ್ ಶಾಕ್ ತಗುಲಿ ಚಿರತೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಪಶುವೈದ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ.