Mangalore: 170 ಗಂಟೆ ಭರತನಾಟ್ಯ ಪ್ರದರ್ಶನ; ಕುಡ್ಲದ ಕುವರಿಯ ಗಿನ್ನೆಸ್ ರೆಕಾರ್ಡ್
29/07/2025
7 ದಿನಗಳ ಕಾಲ ಸುಮಾರು 170 ಗಂಟೆ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ರೆಮೊನಾ ಪಿರೇರಾ ಗಿನ್ನೆಸ್ ದಾಖಲೆ ಬರೆದಿದ್ದಾರೆ.
ಜುಲೈ 21ರಂದು ಬೆಳಗ್ಗೆ 10.30ರಿಂದ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್‌ನಲ್ಲಿ ಭರತನಾಟ್ಯ ಪ್ರದರ್ಶನ ಆರಂಭಿಸಿದ ರೆಮೊನಾ ಅವರು ಜುಲೈ 28ರವರೆಗೆ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಪ್ರತೀ 3 ಗಂಟೆಗೊಮ್ಮೆ 15 ನಿಮಿಷಗಳ ವಿರಾಮ ಪಡೆದು ಸತತ 170 ಗಂಟೆ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ.
ಭರತನಾಟ್ಯದ ವಿವಿಧ ಪ್ರಕಾರಗಳಾದ ಅಲೆರಿಪ್ಪು, ಜತಿಸ್ವರಂ, ಶಬ್ದಂ, ವರ್ಣಂ, ಪದಂ, ತಿಲ್ಲಾನಗಳ ಜತೆಗೆ ಸೆಮಿ ಕ್ಲಾಸಿಕ್, ದೇವರ ನಾಮಗಳಿಗೆ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. 61 ಪದ್ಯವನ್ನು 3 ಗಂಟೆಗಳಿಗೊ0ದರ0ತೆ ಜೋಡಿಸಲಾಗಿತ್ತು. ರೆಮೊನಾ ರಾತ್ರಿ ಹಗಲು ಭರತನಾಟ್ಯ ಪ್ರದರ್ಶನ ನೀಡಿದ್ದಾರೆ.