
Maharashtra: ಮಾಲೆಂಗಾವ್ ಸ್ಫೋಟ ಪ್ರಕರಣ; ಸಾಧ್ವಿ ಪ್ರಜ್ಞಾ ಸೇರಿ ಎಲ್ಲರೂ ಖುಲಾಸೆ
31/07/2025
ಮಹಾರಾಷ್ಟçದ ಮಾಲೆಂಗಾವ್ ಸ್ಫೋಟ ಪ್ರಕರಣದಲ್ಲಿ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಸೇರಿ 7 ಮಂದಿಯನ್ನು ಖುಲಾಸೆಗೊಳಿಸಿ ರಾಷ್ಟಿçÃಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
17 ವರ್ಷಗಳ ಹಿಂದೆ ಮಹಾರಾಷ್ಟçದ ನಾಸಿಕ್ ಜಿಲ್ಲೆಯ ಮಾಲೆಂಗಾವ್ ನಗರದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಸೇರಿದಂತೆ ಹಲವು ಮಂದಿಯ ಹೆಸರಿತ್ತು. ಮಾಲೆಂಗಾವ್‌ನ ಮಸೀದಿಯ ಬಳಿ ಬೈಕ್‌ನಲ್ಲಿದ್ದ ಸ್ಫೋಟಕ ಸ್ಫೋಟಗೊಂಡು 6 ಮಂದಿ ಸಾವನ್ನಪ್ಪಿದ್ದರು. ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಮಹಾರಾಷ್ಟç ಭಯೋತ್ಪಾದನಾ ನಿಗ್ರಹ ದಳಕ್ಕೆ ವಹಿಸಲಾಗಿತ್ತು. ಬಳಿಕ ಎನ್‌ಐಎ ಗೆ ವಹಿಸಲಾಗಿತ್ತು.
2008ರ ಪ್ರಕರಣದ ತೀರ್ಪು ಇದೀಗ ಹೊರ ಬಂದಿದ್ದು, ಪ್ರಜ್ಞಾ ಸಿಂಗ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.