Mumbai: ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ನಿವೃತ್ತಿ; 2 ದಿನ ಮುಂಚೆ ಎಸಿಪಿಯಾಗಿ ಮುಂಬಡ್ತಿ

Mumbai: ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ನಿವೃತ್ತಿ; 2 ದಿನ ಮುಂಚೆ ಎಸಿಪಿಯಾಗಿ ಮುಂಬಡ್ತಿ


ಭೂಗತ ಪಾತಕಿಗಳ ಎದೆ ನಡುಗಿಸಿದ್ದ ಸೂಪರ್ ಕಾಪ್ ಎನ್ ಕೌಂಟರ್ ಸ್ಪೆಶಲಿಸ್ಟ್, ಉಡುಪಿ ಮೂಲದ ದಯಾ ನಾಯಕ್ ಅವರು ನಿವೃತ್ತರಾಗಿದ್ದಾರೆ. ನಿವೃತ್ತಿಗೆ 2 ದಿನ ಮುಂಚೆ ಮಹಾರಾಷ್ಟç ಸರ್ಕಾರ ಅವರಿಗೆ ಎಸಿಪಿ ಹುದ್ದೆಗೆ ಬಡ್ತಿ ನೀಡಿದೆ. 


ಮುಂಬೈನಲ್ಲಿ ಅಪರಾಧ ವಿಭಾಗದ ಯೂನಿಟ್ ನಂ.9 ಮುಖ್ಯಸ್ಥರಾಗಿದ್ದ ಇವರು ಹೈ ಪ್ರೊಫೈಲ್ ಕೇಸ್‌ಗಳನ್ನು ನಿಭಾಯಿಸಿದ್ದರು. ದಾವೂದ್, ಛೋಟಾ ರಾಜನ್ ಸೇರಿ ಗ್ಯಾಂಗ್ ಸ್ಟರ್ ಸದಸ್ಯರ ಮೇಲೆ ಗುಂಡೇಟು ಸೇರಿದಂತೆ 87 ಶೂಟೌಟ್ ಮೂಲಕ ಎನ್‌ಕೌಂಟರ್ ಸ್ಪೆಶಲಿಸ್ಟ್ ಎಂದೇ ಖ್ಯಾತರಾಗಿದ್ದರು. ಆದರೆ 2006 ರಲ್ಲಿ ಮಾಚಿ ಪತ್ರಕರ್ತ ಕೇತನ್ ತಿರೋಡ್ಕರ್ ಅವರು ದಯಾ ನಾಯಕ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದ್ದರು. ಹೀಗಾಗಿ ಎಸಿಬಿಯಿಂದ ಬಂಧನಕ್ಕೊಳಗಾಗಿ ಅಮಾನತ್ತಾಗಿದ್ದರು. ಸುಪ್ರೀಂ ಎಲ್ಲಾ ಆರೋಪಗಳನ್ನು ರದ್ದುಗೊಳಿಸಿದ್ದು, 2012ರಲ್ಲಿ ಸೇವೆಗೆ ಮರು ಸೇರ್ಪಡೆಗೊಂಡಿದ್ದರು. 


ಕಾರ್ಕಳದ ಬಡ ಕುಟುಂಬದಲ್ಲಿ ಹುಟ್ಟಿದ ದಯಾ ನಾಯಕ್ 1979ರಲ್ಲಿ ದುಡಿಮೆಗೆಂದು ಮುಂಬೈಗೆ ಸ್ಥಳಾಂತರವಾಗಿದ್ದರು. ಪ್ಲಂಬರ್ ಮತ್ತು ಕ್ಯಾಂಟೀನ್‌ನಲ್ಲಿ ಸಣ್ಣಪುಟ್ಟ ಕೆಲಸ ಆರಂಭಿಸಿ ಓದು ಕೂಡ ಮುಂದುವರೆಸಿದರು. ಪದವಿ ಮುಗಿಸಿ 1995ರಲ್ಲಿ ಮಹಾರಾಷ್ಟ್ರ ಪೊಲೀಸ್ ವಿಭಾಗದಲ್ಲಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಸೇರಿ, ದಕ್ಷತೆಯಿಂದ ಜನಪ್ರಿಯರಾದರು. ಇನ್ನು ದಯಾನಾಯಕ್ ತಮ್ಮ ಹುಟ್ಟೂರು ಎಣ್ಣೆಹೊಳೆಯಲ್ಲಿ ತಾಯಿ ರಾಧಾ ನಾಯಕ್ ಅವರ ಹೆಸರಿನಲ್ಲಿರುವ ಟ್ರಸ್ಟ್ನಿಂದ ಶಾಲೆಯೊಂದನ್ನು ಸ್ಥಾಪಿಸಿದ್ದಾರೆ. 


ದಯಾ ನಾಯಕ್ ತಮ್ಮ ವೃತ್ತಿ ಜೀವನದಲ್ಲಿ 87 ಗ್ಯಾಂಗ್‌ಸ್ಟರ್‌ಗಳನ್ನು ಶೂಟೌಟ್ ಮಾಡಿದ್ದರು. ದಾವೂದ್ ಇಬ್ರಾಹಿಂ, ಅಮರ್ ನಾಯ್ಕ್, ಛೋಟಾ ರಾಜನ್ , ಅರುಣ್ ಗೌಳಿಯರಂತಹ ಪಾತಕಿಗಳ ನಂಟು ಹೊಂದಿದ್ದವರಿಗೆ ಗುಂಡು ಹಾರಿಸಿದ್ದರು. ಇನ್ನು ಎನ್‌ಕೌಂಟರ್ ಸ್ಪೆಷಲಿಸ್ಟ್ ಅವರ ಜೀವನಗಾಥೆ ಹಲವು ಸಿನಿಮಾ ಕಥೆಗಳಿಗೆ ಸ್ಫೂರ್ತಿಯಾಗಿತ್ತು. ಬಾಲಿವುಡ್‌ನಲ್ಲಿ ಅಬ್ ತಕ್ ಛಪ್ಪನ್ ಮತ್ತು ಡಿಪಾರ್ಟ್ಮೆಂಟ್‌ನ0ತಹ ಸಿನಿಮಾ ಬಂದಿತ್ತು. ಕನ್ನಡದಲ್ಲಿ ಎನ್‌ಕೌಂಟರ್ ದಯಾ ನಾಯಕ್ ಚಿತ್ರ ಬಿಡುಗಡೆಯಾಗಿತ್ತು.





Ads on article

Advertise in articles 1

advertising articles 2

Advertise under the article