
Newdelhi: ಜುಲೈ 14 ರಂದು ಭೂಮಿಗೆ ಮರಳಲಿರುವ ಬಾಹ್ಯಾಕಾಶಯಾನಿ ಶುಭಾಂಶು ಶುಕ್ಲಾ
11/07/2025 09:28 AM
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ತಾಂತ್ರಿಕ ಸಿಬ್ಬಂದಿಗಳು ಮುಂದಿನ ವಾರ ಭೂಮಿಗೆ ಮರಳಲಿದ್ದಾರೆ. ಅವರು ಎರಡು ವಾರಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶದಲ್ಲಿ ತಂಗಿದ್ದು, ಅನೇಕ ಪ್ರಯೋಗಗಳನ್ನು ಕೈಗೊಂಡಿದ್ದಾರೆ. ಶುಭಾಂಶು ಶುಕ್ಲಾ ಮತ್ತು ಆಕ್ಸಿಯಮ್-4 ಕಾರ್ಯಾಚರಣೆಯ ಮೂವರು ಗಗನಯಾತ್ರಿಗಳು ಜುಲೈ 14 ರಂದು ಐಎಸ್‌ಎಸ್‌ನಿಂದ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಘೋಷಿಸಿದೆ.