
Gokarna:ದಟ್ಟಾರಣ್ಯದ ಗುಹೆಯಲ್ಲಿ ವಿದೇಶೀ ಮಹಿಳೆ, ಮಕ್ಕಳ ವಾಸ
12/07/2025 10:53 AM
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ರಾಮತೀರ್ಥ ಅರಣ್ಯ ಪ್ರದೇಶದ ಗುಹೆಯೊಂದರಲ್ಲಿ ವಾಸವಿದ್ದ ರಷ್ಯಾ ಮೂಲದ ಮಹಿಳೆ ಹಾಗೂ ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ರಕ್ಷಿಸಿದ್ದಾರೆ. ರಷ್ಯಾ ಮೂಲದ ಮೋಹಿ(40), ಮಕ್ಕಳಾದ ಪ್ರೆಯಾ(06) ಹಾಗೂ ಅಮಾ(04) ರಕ್ಷಣೆಗೆ ಒಳಗಾದವರು. ಮಹಿಳೆಯು ಮಕ್ಕಳೊಂದಿಗೆ ರಷ್ಯಾದಿಂದ ಬಿಸಿನೆಸ್ ವೀಸಾದಡಿ ಗೋವಾಕ್ಕೆ ಬಂದಿದ್ದು, ಗೋವಾದಿಂದ ಗೋಕರ್ಣಕ್ಕೆ ತೆರಳಿ ದಟ್ಟ ಅರಣ್ಯವಾದ ರಾಮತೀರ್ಥದ ಗುಹೆಯೊಂದರಲ್ಲಿ ಪೂಜೆ ಹಾಗೂ ಧ್ಯಾನ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಈ ಭಾಗದಲ್ಲಿ ಗುಡ್ಡ ಕುಸಿತವಾಗಿದ್ದರಿಂದ ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ವೇಳೆ ಮಹಿಳೆ ಗುಹೆಯಲ್ಲಿ ವಾಸಿಸುತ್ತಿರುವುದು ಕಂಡು ಬಂದಿದೆ. ಮಹಿಳೆ ಹಾಗೂ ಮಕ್ಕಳನ್ನು ರಕ್ಷಿಸಿ, ಆಕೆಯ ಇಚ್ಛೆಯಂತೆ ಬಂಕಿಕೊಡ್ಲದ ಎಜಿಓ ಶಂಕರ ಪ್ರಸಾದ್ ಫೌಂಡೇಶನ್‌ಗೆ ಸಂಬAಧಿಸಿದ ಯೋಗ ರತ್ನ ಸರಸ್ವತಿ ಅವರ ಆಶ್ರಮಕ್ಕೆ ಸೇರಿಸಿದ್ದರು. ಬಳಿಕ ಎಸ್‌ಪಿ ಎಂ. ನಾರಾಯಣ ಅವರ ಸಲಹೆಯಂತೆ ಆಕೆ ಹಾಗೂ ಮಕ್ಕಳನ್ನು ಪೊಲೀಸರ ರಕ್ಷಣೆಯಲ್ಲಿ ಬೆಂಗಳೂರಿಗೆ ಕಳುಹಿಸಿದ್ದು, ರಷ್ಯಾ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ರಷ್ಯಾಕ್ಕೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಿ ಕೊಡಲಾಗಿದೆ.