
Gangolli:ಜಾನುವಾರು ಸಾಗಾಟಕ್ಕೆ ಯತ್ನ ;ಇಬ್ಬರ ಬಂಧನ, ಮತ್ತೊರ್ವನಿಗಾಗಿ ಶೋಧ
15/07/2025 06:03 PM
ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬ್ರಹ್ಮಾವರ ತಾಲೂಕಿನ ಬೈಕಾಡಿ ಹೊನ್ನಾಳಿಯ ನೌಫಲ್(23), ಕುಂದಾಪುರ ಗುಲ್ವಾಡಿ ಮಾವಿನಕಟ್ಟೆಯ ನಿಶಾದ್(23) ಬಂಧಿತರು. ಇನ್ನೋರ್ವ ಆರೋಪಿ ಮಹಮ್ಮದ್ ಅದ್ನಾದ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿಗಳು ಜುಲೈ 7ರಂದು ನಾಡ ಗ್ರಾಮ ಪಂಚಾಯತ್ ಸಮೀಪ ಬಿಳಿ ಸ್ವಿಪ್ಟ್ ಕಾರಿನಲ್ಲಿ ಮಲಗಿದ್ದ ಜಾನುವಾರುಗಳನ್ನು ಸಾಗಾಟ ಮಾಡಲು ಪ್ರಯತ್ನಿಸಿದ್ದರು,. ಈ ಬಗ್ಗೆ ದೂರು ದಾಖಲಾಗಿತ್ತು. ಗಂಗೊಳ್ಳಿ ಠಾಣಾ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಬಂಧಿತರಿಂದ ಮೊಬೈಲ್ ಫೋನ್ ಕೃತ್ಯಕ್ಕೆ ಬಳಸಿದ ಸ್ವಿಪ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಎಸ್ಪಿ ಹರಿರಾಮ್ ಶಂಕರ್ ನಿರ್ದೇಶನದಂತೆ ಗಂಗೊಳ್ಳಿ ಠಾಣಾ ಪಿಎಸ್ಐ ಪವನ್ ನಾಯ್ಕ್ ಹಾಗೂ ಬಸವರಾಜ್ ಕನಶೆಟ್ಟಿ, ಸಿಬ್ಬಂದಿಗಳಾದ ಕೃಷ್ಣ ದೇವಾಡಿಗ, ಚೇತನ್ ಎಸ್, ಶಾಂತರಾಮ ಶೆಟ್ಟಿ, ಸಂದೀಪ್ ಕುರಣಿ, ಪ್ರಸನ್ನ ಮತ್ತು ರಾಘವೇಂದ್ರ ಪೂಜಾರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪೊಲೀಸ್ ತಂಡದ ಕಾರ್ಯಾಚರಣೆಗೆ ಎಸ್ಪಿ ಹರಿರಾಮ್ ಶಂಕರ್ ಅಭಿನಂದನೆ ಸಲ್ಲಿಸಿದ್ದಾರೆ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.