
Gangolli: ಮೀನುಗಾರಿಕಾ ದೋಣಿ ದುರಂತ; ಓರ್ವ ಮೀನುಗಾರನ ಮೃತದೇಹ ಪತ್ತೆ
16/07/2025 04:56 AM
ಗಂಗೊಳ್ಳಿಯಲ್ಲಿ ಮೀನುಗಾರಿಕಾ ದೋಣಿ ಮಗುಚಿ ನಾಪತ್ತೆಯಾಗಿರುವ ಮೂವರ ಪೈಕಿ ಒಬ್ಬ ಮೀನುಗಾರನ ಮೃತದೇಹ ಜುಲೈ. 16ರ ಮುಂಜಾನೆ 3.45 ಸುಮಾರಿಗೆ ಕೋಡಿ ಕಿನಾರೆಯಲ್ಲಿ ಪತ್ತೆಯಾಗಿದೆ. ಗಂಗೊಳ್ಳಿ ಬೇಲಿಕೇರಿ ನಿವಾಸಿ ಲೋಹಿತ್ ಖಾರ್ವಿ(35) ಇವರ ಮೃತದೇಹ ಕೋಡಿ ಲೈಟ್‌ಹೌಸ್ ಬಳಿಯ ಸಮುದ್ರ ತೀರದಲ್ಲಿ ಸಿಕ್ಕಿದೆ.
ನಾಪತ್ತೆಯಾಗಿರುವ ಜಗದೀಶ್ ಖಾರ್ವಿ ಹಾಗೂ ಸುರೇಶ್ ಖಾರ್ವಿ ಅವರ ಸುಳಿವು ಲಭ್ಯವಾಗಿಲ್ಲ. ಶೋಧ ಕಾರ್ಯ ಮುಂದುವರಿದೆ. ಜುಲೈ 15ರಂದು ಗಂಗೊಳ್ಳಿ ಬಂದರಿನಿ0ದ ಮೀನುಗಾರಿಕೆಗೆ ತೆರಳಿದ್ದ ಸುರೇಶ್ ಖಾರ್ವಿ ಮಾಲಕತ್ವದ ದೋಣಿ ಅಲೆಗಳ ರಭಸಕ್ಕೆ ಸಿಲುಕಿ ಸಮುದ್ರ ಪಾಲಾಗಿದೆ. ಘಟನೆಯಲ್ಲಿ ಸಂತೋಷ್ ಖಾರ್ವಿ ಎಂಬವರು ಈಜಿ ಪಾರಾಗಿ ಬಂದಿದ್ದರು. ಉಳಿದ ಮೂವರು ಸಮುದ್ರ ಪಾಲಾಗಿದ್ದು, ಇದೀಗ ಲೋಹಿತ್ ಖಾರ್ವಿ ಮೃತದೇಹ ಸಿಕ್ಕಿದೆ. ಉಳಿದ ಇಬ್ಬರಿಗಾಗಿ ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.