Udupi: ಮಾನಸಿಕ ಅಸ್ವಸ್ಥೆಯ ರಕ್ಷಣೆ; ಸಖಿ ಸೆಂಟರ್‌ನಲ್ಲಿ ಆಶ್ರಯ

Udupi: ಮಾನಸಿಕ ಅಸ್ವಸ್ಥೆಯ ರಕ್ಷಣೆ; ಸಖಿ ಸೆಂಟರ್‌ನಲ್ಲಿ ಆಶ್ರಯ


ಉಡುಪಿ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಬೊಬ್ಬಿಡುತ್ತಾ  ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿಯವರು ಸಿಟಿ ಬಸ್ ಸಿಬ್ಬಂಧಿ ಹಾಗೂ ಮಹಿಳಾ ಪೋಲಿಸರ ಸಹಾಯದಿಂದ ಉಡುಪಿಯ ಸಖಿ ಸೆಂಟರಿಗೆ ದಾಖಲಿಸಿದ್ದಾರೆ. ಗೌರಿ (35) ಎಂಬಾಕೆ ಮೂಲತಃ ಶಿವಮೊಗ್ಗದವಳಾಗಿದ್ದು,ಉಡುಪಿಗೆ ಬಂದ ಬಗ್ಗೆ ನಿಖರವಾದ ಮಾಹಿತಿ ಇಲ್ಲ.ಮಹಿಳೆಯ ಓಡಾಟದಿಂದ ಬಸ್  ಹಾಗೂ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಅಂಬಲಪಾಡಿ ಇವರು ಮಹಿಳೆಯನ್ನು ರಕ್ಷಿಸಿ ಸಖಿ ಕೇಂದ್ರಕ್ಕೆ ಸೇರಿಸಿದ್ದಾರೆ. ಮಹಿಳೆಯ ಸಂಬ0ಧಿಕರು ಯಾರಾದರೂ ಇದ್ದಲ್ಲಿ ಸಖಿ ಸೆಂಟರ್ ಅಥವಾ ಉಡುಪಿ ಮಹಿಳಾ ಠಾಣೆಯನ್ನು ಸಂಪರ್ಕಿಸಿವ0ತೆ ವಿಶುಶೆಟ್ಟಿ ಅಂಬಲಪಾಡಿಯವರು ವಿನಂತಿಸಿದ್ದಾರೆ.



Ads on article

Advertise in articles 1

advertising articles 2

Advertise under the article