
Udupi: ಲಂಬಾಣಿ ಸಮುದಾಯದ ಗುಳೆ ನಿಯಂತ್ರಣಕ್ಕೆ ಆಗ್ರಹ; ಡಿಸಿ ಮೂಲಕ ಸಿಎಂಗೆ ಮನವಿ
29/07/2025
ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ನೆಲೆಸಿರುವ ಬಂಜಾರಾ (ಲ0ಬಾಣಿ) ಸಮುದಾಯದವರ ಗುಳೆ ನಿಯಂತ್ರಣ ಹಾಗೂ ಶಾಶ್ವತ ಉದ್ಯೋಗ ಅವಕಾಶ ಕಲ್ಪಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ಉಡುಪಿ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಸ್ವರೂಪ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಚವ್ಹಾನ್ ಮೊದಲಾದವರು ಇದ್ದರು.