
Bantwal: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ; ಪೊಲೀಸರಿಂದ ಪರಿಶೀಲನೆ
01/08/2025
ಕಳೆದ ಕೆಲ ದಿನಗಳಿಂದ ಸ್ಕೂಟರ್ ಹಾಗೂ ಮೊಬೈಲನ್ನು ಬಂಟ್ವಾಳದ ಪುಂಜಾಲಕಟ್ಟೆ ರಸ್ತೆ ಸಮೀಪ ಜಕ್ರಿಬೆಟ್ಟು ಕಿಂಡಿ ಅಣೆಕಟ್ಟು ಬಳಿ ಬಿಟ್ಟು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆಯಾಗಿದೆ.
ಕಡೇಶಿವಾಲಯದ ಹೇಮಂತ್ ಆಚಾರ್ಯ(21) ಎಂಬಾತನ ಶವ ನಾಲ್ಕು ದಿನಗಳ ಬಳಿ ಬಜಾಲ್ ಮುಗೇರು ಎಂಬಲ್ಲಿ ನೇತ್ರಾವತಿ ನದಿ ಮಧ್ಯಭಾಗದಲ್ಲಿ ಪತ್ತೆಯಾಗಿದೆ. ಜುಲೈ 27 ರಂದು ಹೇಮಂತ್ ನಾಪತ್ತೆಯಾಗಿದ್ದರು. ಜುಲೈ 28 ರಂದು ನೇತ್ರಾವತಿ ನದಿ ಪಕ್ಕ ಸ್ಕೂಟರ್ ಮತ್ತು ಮೊಬೈಲ್ ಪತ್ತೆಯಾಗಿತ್ತು. ಇದೀಗ ಹೇಮಂತ್ ಮೃತದೇಹ ಪತ್ತೆಯಾಗಿದೆ.