Moodigere: ನಯನಾ ಮೋಟಮ್ಮ ಪಕ್ಷಾಂತರ ಮಾಡ್ತಾರಾ? ಆದದ್ದೇನು? (ವೀಡಿಯೊ)

Moodigere: ನಯನಾ ಮೋಟಮ್ಮ ಪಕ್ಷಾಂತರ ಮಾಡ್ತಾರಾ? ಆದದ್ದೇನು? (ವೀಡಿಯೊ)


ಹಿಂದೂವಾಗಿ, ದಲಿತೆಯಾಗಿ, ಮಹಿಳೆಯಾಗಿ ಮೂಡಿಗೆರೆಯಲ್ಲಿ ಜನಿಸಿದ್ದೇನೆ. ಮುಂದೆ ಬಿಜೆಪಿಗೆ ಹೋಗ್ತಿನೊ, ಕಾಂಗ್ರೆಸ್ಸಿನಲ್ಲೇ ಉಳಿತಿನೋ, ಬಿಎಸ್‌ಪಿ ಅಥವಾ ಎಸ್‌ಡಿಪಿಐ ಸೇರುತ್ತೇನೋ ಎಂಬ ಪ್ರಶ್ನೆಗೆ ಮೂರು ವರ್ಷ ಕಾಯೋಣ’ ಎಂದು ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಹೇಳಿರುವ ವೀಡಿಯೋ ವೈರಲ್ ಆಗಿರುವ ಬೆನ್ನಿಗೇ ನಯನಾ ಅವರ ಪಕ್ಷನಿಷ್ಠೆಯ ಕುರಿತು ಪ್ರಶ್ನೆಗಳು ಏಳಲಾರಂಭಿಸಿವೆ. 

ಮೂಡಿಗೆರೆಯಲ್ಲಿ ಸಾರ್ವಜನಿಕ ಶ್ರೀಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿ ವತಿಯಿಂದ ನಡೆದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಶಾಸಕಿ ನಯನಾ ಮೋಟಮ್ಮ, "ಇಂದು ಕೇಸರಿ ಶಾಲು ಹಾಕಿ ಬಂದಿದ್ದೇನೆ. ಪಕ್ಷದ ಕಾರ್ಯಕರ್ತರೂ ಬಂದಿದ್ದಾರೆ. ಈ ಬಗ್ಗೆ ಹಲವರಿಗೆ ಪ್ರಶ್ನೆಗಳಿವೆ. ನದಿ ಎಂದರೆ ಕಾಂಗ್ರೆಸ್ಸಾ? ದಡ ಎಂದರೆ ಬಿಜೆಪಿಯಾ? ಈ ಕುರಿತು ಶಂಕೆ ಬೇಡ’ ಎಂದು

ಒಗಟೊಗಟಾಗಿ 
ಮಾತನಾಡಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ನಯನಾ ಮೋಟಮ್ಮ ವಿರುದ್ಧ ಆಕ್ರೋಶಭರಿತ ಮಾತುಗಳನ್ನಾಡಿ ರಾಹುಲ್ ಗಾಂಧಿ, ಸಿದ್ಧರಾಮಯ್ಯ ಅವರಿಗೆ ಟ್ಯಾಗ್ ಮಾಡುತ್ತಿದ್ದಾರೆ.




Ads on article

Advertise in articles 1

advertising articles 2

Advertise under the article