Udupi: ಭಾರೀ ಗಾಳಿ ಮಳೆ; ಮರ ಉರುಳಿ ಹಲವೆಡೆ ಹಾನಿ

Udupi: ಭಾರೀ ಗಾಳಿ ಮಳೆ; ಮರ ಉರುಳಿ ಹಲವೆಡೆ ಹಾನಿ




ಶುಕ್ರವಾರ ಸಂಜೆ 4 ಗಂಟೆಯ ಬಳಿಕ ಸುಮಾರು 5-10 ನಿಮಿಷಗಳ ಕಾಲ ಸುರಿದ ಭಾರೀ ಗಾಳಿ ಮಳೆಗೆ ಉಡುಪಿ ಸಮೀಪದ ಕುಕ್ಕಿಕಟ್ಟೆ, ಅಲೆವೂರು ಸುತ್ತಮುತ್ತಲಿನಲ್ಲಿ ಮರಗಳು, ಮರದ ಗೆಲ್ಲುಗಳು ಉರುಳಿ ಬಿದ್ದು ಹಾನಿ ಸಂಭವಿಸಿದೆ. 



ಕೆಲವೊಂದು ಫ್ಲೆಕ್ಸ್ ಫಲಕಗಳು, ಕಟ್ಟಡಗಳ ಹಂಚು ಹಾರಿ ಹೋಗಿ, ಕಷ್ಟ ನಷ್ಟ ಸಂಭವಿಸಿರುವ ಬಗ್ಗೆಯೂ ಪ್ರತ್ಗಕ್ಷದರ್ಶಿಗಳು ತಿಳಿಸಿದ್ದಾರೆ.



ಪ್ರಕೃತಿ ವಿಕೋಪದ ಹಾನಿ ಕುರಿತು ಸರಕಾರಕ್ಕೆ ವರದಿ ನೀಡುವ ಕಂದಾಯ ಅಧಿಕಾರಿಗಳ ಕಚೇರಿ ಮೇಲೆಯೇ ಮರವೊಂದು ಉರುಳಿ ಬಿದ್ದು, ಕಟ್ಟಡಕ್ಕೆ ಹಾನಿಯಾದ ಘಟನೆ ಕುಕ್ಕಿಕಟ್ಟೆ ಡಯಾನಾ ಥಿಯೇಟರ್ ನಿಂದ ಇಂದಿರಾನಗರ ಮಾರ್ಗದ ಬಳಿ ನಡೆದಿದೆ. ಸಮಾಜ ಸೇವಕ ಗಣೇಶ್ ದೇವಾಡಿಗ ಹಾಗೂ ಅವರ ತಂಡ ಉರುಳಿ ಬಿದ್ದ ಮರವನ್ನು ಕಡಿದು ತೆರವುಗೊಳಸಿದೆ.

Ads on article

Advertise in articles 1

advertising articles 2

Advertise under the article