
Mangalore: "ಮಿಸ್ಸ್ ಬ್ಯೂಟಿಫುಲ್ ಐಸ್" ಪ್ರಶಸ್ತಿ; ಕರಾವಳಿ ಬೆಡಗಿಯ ಮುಡಿಗೆ ಮತ್ತೊಂದು ಕಿರೀಟ
23/07/2025
ಹೊಸದಿಲ್ಲಿಯ ಲೀಲಾ ಪ್ಯಾಲೇಸ್‌ನಲ್ಲಿ ಜುಲೈ 12ರಂದು ಗ್ಲಾಮರ್ ಗುರ್ಗಾಂವ್ ಆಯೋಜಿಸಿದ್ದ ಮಿಸ್ಸ್ ವಲ್ಡ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಮಂಗಳೂರಿನ ಮೈತ್ರಿ ಮಲ್ಲಿ ಅವರು ಮಿಸ್ಸ್ ಬ್ಯೂಟಿಫುಲ್ ಐಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ದುಬೈ, ಆಸ್ಟ್ರೇಲಿಯಾ, ಲಂಡನ್, ಯುಎಸ್‌ಎ ಮುಂತಾದ ಅನೇಕ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಮೈತ್ರಿ ಅವರ ವಿಭಾಗದಲ್ಲಿ 2೦೦ಕ್ಕೂ ಹೆಚ್ಚು ಸ್ಪರ್ಧಿಗಳಿದ್ದರು. ಮೈತ್ರಿ ಮಲ್ಲಿ ಅವರು ದಿ. ಬನ್ನಂಪಳ್ಳಿ ಮಧುಕರ್ ಮಲ್ಲಿ ಮತ್ತು ಅಂಜಾರ ಬೀಡು ವಿಜಯಲಕ್ಷ್ಮಿ ಎಂ. ಮಲ್ಲಿ ಅವರ ಪುತ್ರಿ ಹಾಗೂ ವಿಕಾಸ್ ಮನೋಹರ್ ಅವರ ಪತ್ನಿ. ಎಂಬಿಎ, ಎಂಜಿನಿಯರ್ ಪದವೀಧರರಾಗಿರುವ ಇವರು ಅಟೊಮ್ ಫಿಟ್ನೆಸ್ ಕ್ಲಬ್ ಮಂಗಳೂರಿನ ಸಹ-ಸಂಸ್ಥಾಪಕಿಯೂ ಆಗಿದ್ದಾರೆ.
ಮೈತ್ರಿ ಅವರು ೨೦೦೩ ರಲ್ಲಿ ಮಿಸ್ ಮ್ಯಾಂಗಲೂರು, ಮತ್ತು ೨೦೧೨ ರಲ್ಲಿ ಮಿಸ್ ಬಂಟ್ ವರ್ಲ್ಡ್ ಕಿರೀಟ ಪಡೆದುಕೊಂಡಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಯೋಗ ಚಾಂಪಿಯನ್ ಕೂಡ ಆಗಿರುವ ಮೈತ್ರಿ ಅವರು ಅತ್ಯುತ್ತಮ ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ.