-->
 Udupi: ಜಾತಿಗಣತಿ ಸಮೀಕ್ಷೆಗೆ ರಾಜಕೀಯ ಲೇಪ ಸರಿಯಲ್ಲ; ಐವನ್ ಡಿಸೋಜಾ (Video)

Udupi: ಜಾತಿಗಣತಿ ಸಮೀಕ್ಷೆಗೆ ರಾಜಕೀಯ ಲೇಪ ಸರಿಯಲ್ಲ; ಐವನ್ ಡಿಸೋಜಾ (Video)


ಜಾತಿ ಗಣತಿ ಸಮೀಕ್ಷೆಗೆ ಬಿಜೆಪಿಗರು ರಾಜಕೀಯ ಲೇಪ ಕೊಡುವ ಅವಶ್ಯಕತೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ. 

ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಜಾತಿಗಣತಿ ಸಮೀಕ್ಷೆ ಯಾವುದೇ ರಾಜಕೀಯ ಸಮೀಕ್ಷೆಯಲ್ಲ. ಇದರಲ್ಲಿ ಬಿಜೆಪಿಗರು ಅಪಸ್ವರ ಎತ್ತುತ್ತಿರುವುದು ಸರಿಯಲ್ಲ. ಕಳೆದ 10 ವರ್ಷಗಳ ಹಿಂದೆ ನಡೆದ ಸಮೀಕ್ಷೆಯಲ್ಲಿ ತನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಆರೋಪ ಮಾಡಿದ್ದರು. ಆದರೆ ಈ ಬಾರಿಯ ಸಮೀಕ್ಷೆಯಲ್ಲಿ ಅವರೂ ಎಲ್ಲಾ ಶಾಸಕರು, ಸಮಾಜಸೇವಕರು ಸೇರಿದಂತೆ ಎಲ್ಲರೂ ಭಾಗವಹಿಸಿ, ನ್ಯೂನ್ಯತೆಗಳಿದ್ದಲ್ಲಿ ತಿಳಿಸಿಕೊಡಿ ಎಂದು ಹೇಳಿದರು.





Ads on article

Advertise in articles 1

advertising articles 2

Advertise under the article