-->
ಗಾಜು ತಗುಲಿ ಸಾಮಾಜಿಕ ಕಾರ್ಯಕರ್ತ ಸುನಿಲ್ ಬೈಲಕೆರೆ ಸಾವು

ಗಾಜು ತಗುಲಿ ಸಾಮಾಜಿಕ ಕಾರ್ಯಕರ್ತ ಸುನಿಲ್ ಬೈಲಕೆರೆ ಸಾವು


ನಿಟ್ಟೂರಿನ ಶ್ರೀದೇವಿ ಗ್ಲಾಸ್ ಫ್ಯಾಕ್ಟರಿಯಲ್ಲಿ ಗಾಜಿನ ಬ್ಲಾಕ್ ಗಳನ್ನು ಅನ್ ಲೋಡ್ ಮಾಡುತ್ತಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ ಸಾಮಾಜಿಕ ಕಾರ್ಯಕರ್ತ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ಉಡುಪಿ 
ಶ್ರೀಕೃಷ್ಣ ಮಠ ಪರಿಸರದ ನಿವಾಸಿ ಸುನಿಲ್ ಬೈಲಕೆರೆ (45) ಸಾವನ್ನಪ್ಪಿದ್ದಾರೆ. 
ಗಾಜಿನ ಬ್ಲಾಕ್ ಗಳು ಸುನೀಲ್ ಅವರ ಮೇಲೆ ಎರಗಿ, ಎದೆ ಭಾಗ ಜಜ್ಜಿ ಹೋಗಿದ್ದು, ತಕ್ಷಣ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಸ್ಪತ್ರೆಗೆ ತರುವ ಮುಂಚೆಯೇ ಅವರು ಮೃತಪಟ್ಟಿದ್ದರೆನ್ನಲಾಗಿದೆ. 

ಸುನೀಲ್ ಅವರು ಹಿಂದಿನ ಶೀರೂರು ಶ್ರೀಗಳಾದ ದಿ. ಲಕ್ಷ್ಮೀವರ ತೀರ್ಥ ಶ್ರೀಪಾದರ ಆಪ್ತರಾಗಿದ್ದು. ಶ್ರೀಗಳ ಕಾರು ಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು. 


ಮೃತರು ಪತ್ನಿ,  ಇಬ್ಬರು ಪುತ್ರರು, ಬಂಧು ಬಳಗವನ್ನು ಅಗಲಿದ್ದಾರೆ. 

Ads on article

Advertise in articles 1

advertising articles 2

Advertise under the article