-->
ನ. 7: ಉಡುಪಿ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

ನ. 7: ಉಡುಪಿ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ


ಉಡುಪಿ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ವರ್ಷಂಪ್ರತಿ ವಾಡಿಕೆಯಂತೆ ಜರಗಲಿರುವ ಕಾರ್ತಿಕ ದೀಪೋತ್ಸವದ ವಿವಿಧ ಧಾರ್ಮಿಕ ಕಾರ್ಯಕಲಾಪಗಳು ನ. 7ರಂದು ಶುಕ್ರವಾರ ವಿಜೃಂಭಣೆಯಿಂದ ಜರುಗಲಿದೆ.

ನಸುಕಿನ ಗಂಟೆ 12.05ಕ್ಕೆ ಪ್ರಾರ್ಥನೆ; ನಂತರ ಶ್ರೀದೇವರ ಸವಾರಿಯು ವನಕ್ಕೆ ಹೊರಡುವುದು. ಅಪರಾಹ್ನ 3ಕ್ಕೆ ಮಹಾಪೂಜೆ, ಸಾಯಂಕಾಲ 3.30ರಿಂದ ಸಮಾಜ ಬಾಂಧವರಿಗೆ ಮಹಾಸಮಾರಾಧನೆ; ರಾತ್ರಿ ಗಂಟೆ 8.00 ಕ್ಕೆ ರಾತ್ರಿ ಪೂಜೆ, ನಂತರ ಕೆರೆ ಉತ್ಸವ, ಬಳಿಕ ಪೇಟೆ ಉತ್ಸವ ಇತ್ಯಾದಿ ಕಾರ್ಯಕ್ರಮಗಳು ಜರಗಲಿರುವುದು.  ಮರುದಿವಸ ನ. 8ರಂದು ಶನಿವಾರ ಅವನೃತೋತ್ಸವದ ವಿವಿಧ ಧಾರ್ಮಿಕ ಕಾರ್ಯಕಲಾಪಗಳು ಜರಗಲಿರುವುದು. ಬೆಳಿಗ್ಗೆ ಗಂಟೆ 10.30 ಕ್ಕೆ ಶ್ರೀದೇವರ ಅವಭೃತೋತ್ಸವದ ಪೇಟೆ ಉತ್ಸವ ಪ್ರಾರಂಭ. ಸಾಯಂಕಾಲ 5.30ಕ್ಕೆ ಮಹಾಪೂಜೆ, ನಂತರ ಸಮಾಜಬಾಂಧವರಿಗೆ ಮಹಾ ಸಮಾರಾಧನೆ, ರಾತ್ರಿ 8ಕ್ಕೆ ರಾತ್ರಿ ಪೂಜೆ ಎಂದು ಶ್ರೀ ದೇವಸ್ಥಾನದ ಪ್ರಕಟನೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article