-->
ಇಬ್ಬರನ್ನು ತುಳಿದು ಕೊಂದ ಮದ್ದಾನೆ ಕುದುರೆಮುಖ ನೇಚರ್ ಕ್ಯಾಂಪ್ ಬಳಿ ಸೆರೆ (ವೀಡಿಯೊ)

ಇಬ್ಬರನ್ನು ತುಳಿದು ಕೊಂದ ಮದ್ದಾನೆ ಕುದುರೆಮುಖ ನೇಚರ್ ಕ್ಯಾಂಪ್ ಬಳಿ ಸೆರೆ (ವೀಡಿಯೊ)


ಇಬ್ಬರ ಸಾವಿಗೆ ಕಾರಣವಾಗಿ ಸ್ಧಳೀಯರ ನಿದ್ದೆಗೆಡಿಸಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಬೃಹತ್ ಕಾರ್ಯಾಚರಣೆ ನಡೆಸಿ ಕುದುರೆಮುಖ ಭಗವತಿ ನೇಚರ್ ಕ್ಯಾಂಪ್ ಬಳಿ ಸೆರೆ ಹಿಡಿಯುವಲ್ಲಿ ನಿನ್ನೆ ರಾತ್ರಿ ಯಶಸ್ವಿಯಾಗಿದೆ. 


2025ರ ಅಕ್ಟೋಬರ್ 31ರಂದು, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕುದ್ರೆಮುಖ ವನ್ಯಜೀವಿ ವಿಭಾಗದ ಕೆರೆಕಟ್ಟೆ ವ್ಯಾಪ್ತಿಯ ಬಳಿ ಒಂದು ಕಾಡಾನೆ ಗ್ರಾಮಸ್ಥರಾದ ಹರೀಶ್ ಶೆಟ್ಟಿ ಮತ್ತು ಉಮೇಶ್ ಎಂಬಿಬ್ಬರು ಗ್ರಾಮಸ್ಥರನ್ನು ತುಳಿದು ಕೊಂದಿತ್ತು.  

ಗ್ರಾಮಸ್ಥರ ಪ್ರತಿಭಟನೆಗಳ ನಂತರ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈ ಘಟನೆಗೆ ಕಾರಣವಾದ “ಮದಗಜ” ಹಿಡಿಯುವ ಕಾರ್ಯಾಚರಣೆಯನ್ನು ಆರಂಭಿಸಲು ಆದೇಶಿಸಿದ್ದರು.  

ನವೆಂಬರ್ 2ರಂದು ಆನೆಗೆ ಖೆಡ್ಡಾ ತೋಡುವ ಕಾರ್ಯಾಚರಣೆ ಆರಂಭವಾಗಿದ್ದು, ದುಬಾರೆ, ಸಕ್ರೆಬೈಲು ಹಾಗೂ ನಾಗರಹೊಳೆ ಆನೆ ಕ್ಯಾಂಪ್ ಗಳಲ್ಲಿ ತರಬೇತಿಗೊಳಗಾದ ಐದು ಅನೆಗಳನ್ನು ಈ ಕಾರ್ಯಾಚರಣೆಗೆ ಬಳಸಲಾಗಿತ್ತು. ಜೊತೆಗೆ ಡ್ರೋನ್ ಬಳಸಿ ಆನೆಯ ಚಲನ ವಲನಗಳನ್ನು ತಿಳಿಯಲಾಗಿತ್ತು.

ಕಾರ್ಕಳ ಡಿಎಫ್ಒ ಶಿವರಾಮ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. 

Ads on article

Advertise in articles 1

advertising articles 2

Advertise under the article