-->
ಕಾರು- ಸ್ಕೂಟರ್ ಡಿಕ್ಕಿ; ಸಹಸವಾರೆ ಮೃತ್ಯು, ಸವಾರನಿಗೆ ಗಾಯ

ಕಾರು- ಸ್ಕೂಟರ್ ಡಿಕ್ಕಿ; ಸಹಸವಾರೆ ಮೃತ್ಯು, ಸವಾರನಿಗೆ ಗಾಯ


ಕಾರು ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸಹ ಸವಾರೆ ಮೃತಪಟ್ಟ ಘಟನೆ ಬೈಂದೂರಿನ ಯಳಜಿತ ಗ್ರಾಮದ ಗೋಳಿ ಮರ ಕ್ರಾಸ್ ಬಳಿ ನಡೆದಿದೆ. 

ಸ್ಕೂಟರ್ ಸಹ ಸವಾರೆ ತಸ್ಬಿಯಾ ಬೇಗಂ ಮೃತಪಟ್ಟವರು. ಸವಾರ ಸುಭಾನ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರಹ್ಮಾವರದಿಂದ ಗೋಳಿಹೊಳೆ ಕಡೆಗೆ ತೆರಳುತ್ತಿದ್ದ ಕಿಯಾ ಕಾರಿಗೆ ಕೊಲ್ಲೂರು ಕಡೆಯಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ಸ್ಕೂಟರ್ ಡಿಕ್ಕಿಯಾಗಿದೆ. ಸ್ಕೂಟರ್ ಸವಾರ ಸುಭಾನ್ ಅವರು ಅತೀವೇಗದಿಂದ ಸ್ಕೂಟರ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ದೂರು ನೀಡಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


Ads on article

Advertise in articles 1

advertising articles 2

Advertise under the article