-->
ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ; ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ ಬಂಧನ

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ; ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ ಬಂಧನ


ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ  ಸುಧೀಶ್ ಕುಮಾರ್ ಅವರನ್ನು ಎಸ್‌ಐಟಿ ತಂಡ ಬಂಧಿಸಿದೆ. 


ತಿರುವನಂತಪುರದ ಅಪರಾಧ ಶಾಖೆಯ ಕಚೇರಿಯಲ್ಲಿ ಎಸ್‌ಐಟಿ ವಿಚಾರಣೆ ನಡೆಸಿದ ನಂತರ ಸುಧೀಶ್ ಕುಮಾರ್ ಅವರನ್ನು ಬಂಧಿಸಲಾಯಿತು. ಕುಮಾರ್ 2019ರಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಚಿನ್ನದಿಂದ ಲೇಪಿತವಾದ ದ್ವಾರಪಾಲಕ ವಿಗ್ರಹಗಳನ್ನು, ತಾಮ್ರದಿಂದ ಮಾಡಲಾಗಿದೆ ಎಂದು ದೇವಾಲಯದ ಅಧಿಕೃತ ದಾಖಲೆಗಳಲ್ಲಿ ಬರೆದು ಸುಧೀಶ್ ಅವರು ಮರೆಮಾಚಿದ್ದಾರೆ ಎಂದು ಆರೋಪಿಸಲಾಗಿದೆ. 


2019ರಲ್ಲಿ ದ್ವಾರಪಾಲಕ ಫಲಕಗಳನ್ನು ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಗೆ ಚಿನ್ನದ ಲೇಪನಕ್ಕಾಗಿ ಹಸ್ತಾಂತರಿಸಿದಾಗ, ಸುಧೀಶ್ ಕುಮಾರ್ ಅವುಗಳನ್ನು ತಾಮ್ರದ ಫಲಕಗಳಾಗಿ ದಾಖಲಿಸಿದ್ದಾರೆ ಎಂದು ಹೇಳಲಾಗಿದ್ದು, ಆರೋಪಿಗಳು ನಂತರ ಚಿನ್ನದ ಲೇಪನವನ್ನು ಬೇರ್ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಮಾಜಿ ಆಡಳಿತ ಅಧಿಕಾರಿ ಬಿ ಮುರಾರಿ ಬಾಬು ಅವರನ್ನು ಸಹ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. 


Ads on article

Advertise in articles 1

advertising articles 2

Advertise under the article