ಪತ್ನಿಯನ್ನು ಕೊಲೆಗೈದು ಪೊಲೀಸರಿಗೆ ಶರಣಾದ ಪತಿ
Saturday, December 27, 2025
ಕೆಲಸದ ವಿಚಾರದಲ್ಲಿ ಜಗಳ ನಡೆದು ಪತಿಯೇ ಪತ್ನಿಯನ್ನು ಕೊಲೆಗೈದ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಅಗ್ರಹಾರ ಲೇಔಟ್‌ನಲ್ಲಿ ನಡೆದಿದೆ.
ಆಯೇಷಾ ಸಿದ್ದಿಕಿ ಕೊಲೆಯಾದ ಮಹಿಳೆ. ಆಕೆಯ ಪತಿ ಸೈಯದ್ ಜಬಿ (47) ಕೊಲೆ ಮಾಡಿದ ಆರೋಪಿ. ಆಯೇಷಾ 3 ತಿಂಗಳ ಹಿಂದೆ ಸೈಯದ್‌ನನ್ನು ಮದುವೆಯಾಗಿದ್ದಳು. ಈ ಹಿಂದೆ ಮದುವೆಯಾಗಿ ಮೊದಲ ಗಂಡ ಮೃತಪಟ್ಟ ಬಳಿಕ ಆಯೇಷಾಗೆ 2ನೇ ಮದುವೆಯಾಗಿತ್ತು. 2ನೇ ಪತಿಗೂ ಡಿವೋರ್ಸ್ ನೀಡಿ ಸೈಯದ್ ಜೊತೆ ಆಯೇಷಾ ವಿವಾಹವಾಗಿತ್ತು.
ಆಯೆಷಾ ಮಸಾಜ್ ಪಾರ್ಲರ್, ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಕೆಲಸ ಬಿಡುವಂತೆ ಪತಿ ಸೈಯದ್ ಒತ್ತಾಯಿಸಿದ್ದ. ಕೆಲಸದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು ಜಗಳ ವಿಕೋಪಕ್ಕೆ ತಿರುಗಿ ಸೈಯದ್ ಪತ್ನಿ ಆಯೇಷಾಳನ್ನು ಕೊಂದಿದ್ದಾನೆ. ಬಳಿಕ ತಾನೇ ಹೋಗಿ ಯಲಹಂಕ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಘಟನೆ ಸಂಬOಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.