10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯನ್ನು ಪತ್ತೆಹಚ್ಚಿದ ಉಡುಪಿ ಪೊಲೀಸರು
Monday, January 26, 2026
ಸುಮಾರು 10 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರನ್ನು ಉಡುಪಿ ನಗರ ಪೊಲೀಸರು ಬೆಂಗಳೂರಿನಲ್ಲಿ ಪತ್ತೆ ಹಚ್ಚಿದ್ದಾರೆ.
ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಅವರ ಮಾರ್ಗದರ್ಶನದಲ್ಲಿ ಮಹಿಳಾ ಮಿಸ್ಸಿಂಗ್ ಟಾಸ್ಕ್ ಫೋರ್ಸ್ ಹಾಗೂ ಉಡುಪಿ ನಗರ ಪೊಲೀಸರು ಮಹಿಳೆಯನ್ನು ಪತ್ತೆಹಚ್ಚಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ನಿವಾಸಿಯಾಗಿರುವ ಭವಾನಿ ಅವರು ಹುಟ್ಟಿದಾಗಿನಿಂದ ಅನಾಥಾಶ್ರಮದಲ್ಲೇ ವಾಸಿಸುತ್ತಿದ್ದರು. 10 ವರ್ಷದ ಹಿಂದೆ ಅವರು ಏಕಾಏಕಿ ನಾಪತ್ತೆಯಾಗಿದ್ದರು. ಇದೀಗ ಮಹಿಳೆಯನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿರುವ ಉಡುಪಿ ಪೊಲೀಸರು ಉಡುಪಿಗೆ ಕರೆ ತಂದಿದ್ದಾರೆ.
