-->
 ಕೇರಳದಲ್ಲಿ ಪುರುಷರ "ಡೋಂಟ್ ಟಚ್" ವೀಡಿಯೋದ್ದೇ ಟ್ರೆಂಡ್...!

ಕೇರಳದಲ್ಲಿ ಪುರುಷರ "ಡೋಂಟ್ ಟಚ್" ವೀಡಿಯೋದ್ದೇ ಟ್ರೆಂಡ್...!


ಜನ ಜಂಗುಲಿ ಇರುವ ಬಸ್ಸಿನಲ್ಲಿ ಮಹಿಳೆಯರಿಂದ ತಪ್ಪಿಸಿಕೊಳ್ಳಲು ಪುರುಷರು ಹೊಸ ಹೊಸ ಆವಿಷ್ಕಾರದ ಮೊರೆ ಹೋಗಿದ್ದಾರೆ. ಕೇರಳದಲ್ಲಂತೂ ಪುರುಷರ ಹೊಸ ಐಡಿಯಾಗಳು ಸಕತ್ ಟ್ರೆಂಡ್ ಆಗುತ್ತಿದೆ. ರಶ್ ಇರೋ ಬಸ್ಸಿನಲ್ಲಿ ಪುರುಷರು ಇದೇ ಐಡಿಯಾ ಬಳಸಿ ಎನ್ನುವ ಕರೆ ನೀಡಲಾಗುತ್ತಿದೆ.


ಕೇರಳದ ಕೋಝಿಕ್ಕೋಡ್‌ನಲ್ಲಿ ಜನ ಜಂಗುಲಿ ಇದ್ದ ಬಸ್ಸಿನಲ್ಲಿ ಯುವತಿಯೊಬ್ಬಳು ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ವಿಡಿಯೋ ಮಾಡಿ ವೈರಲ್ ಮಾಡಿದ್ದಳು. ಈ ವಿಡಿಯೋ ವೈರಲ್ ಆದ ಬೆನಲ್ಲೆ ವಿಡಿಯೋದಲ್ಲಿದ್ದ ಯುವಕ ದೀಪಕ್ ಎಂಬಾತ ಅವಮಾನ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದ. ಬಳಿಕ ಕೇರಳದಲ್ಲಿ ಯುವತಿಯ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆಕೆಯ ವಿರುದ್ಧ ಪ್ರಕರಣ ಕೂಡಾ ದಾಖಲಾಗಿದೆ.


ಈ ನಡುವೆ ಈ ಘಟನೆಗೆ ಕೇರಳದಲ್ಲಿ ವಿವಿಧ ರೀತಿಯಲ್ಲಿ ಮೀಮ್ಸ್ ಗಳ ವಿಡಿಯೋಗಳು ಟ್ರೆಂಡ್ ಆಗಲು ಪ್ರಾರಂಭಿಸಿದೆ. ಪುರುಷರು ಘಟನೆಯನ್ನು ಖಂಡಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇರಳದಲ್ಲಿ ಪುರುಷರಿಗೂ ರಕ್ಷಣೆ ನೀಡಬೇಕೆಂದು ಒತ್ತಾಯಿಸುವ ಧ್ವನಿ ಕೇಳಿಬರುತ್ತಿದೆ. 

ಈ ಸಂಬOಧ ಇನ್‌ಸ್ಟಾಗ್ರಾಮ್ ವೀಡಿಯೊಗಳು ವೈರಲ್ ಆಗುತ್ತಿವೆ. ಬಸ್‌ನಲ್ಲಿ ಸಂಚರಿಸುವ ವೇಳೆ ಮಹಿಳೆಯರು ಹತ್ತಿರ ಬಾರದಂತೆ ಪುರುಷರು ಕಾರ್ಡ್ಬೋರ್ಡ್ ಪೆಟ್ಟಿಗೆಗಳನ್ನು ಅಂಟಿಸಿಕೊAಡು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಕೆಲವು ವಿಡಿಯೋಗಳಲ್ಲಿ ಮನೆಯಿಂದಲೇ ಕ್ರಿಕೆಟ್ ಲೆಗ್ ಗಾರ್ಡ್ ಗಳನ್ನು ಕೈಗೆ ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಕೆಲವರು ಮೈಗೆ ಕಬ್ಬಿಣಿದ ಮುಳ್ಳುಗಳನ್ನು ಹಾಕಿಕೊಂಡು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಅಲ್ಲದೆ ಬಸ್ ಕಂಡಕ್ಟರ್ ಸ್ವತಃ ರಟ್ಟಿನ ಪೆಟ್ಟಿಗೆಯನ್ನು ಹೊತ್ತುಕೊಂಡು ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಇದೀಗ ಈ ವಿಡಿಯೋಗಳು ಟ್ರೆಂಡ್ ಆಗಿದ್ದು, ಇದೊಂದು ವಿಭಿನ್ನ ರೀತಿಯ ಪ್ರತಿಭಟನೆ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ತಿಳಿಸಿದ್ದಾರೆ. 





Ads on article

Advertise in articles 1

advertising articles 2

Advertise under the article