ಶೀರೂರು ಪರ್ಯಾಯದ ಅದ್ದೂರಿ ಶೋಭಾಯಾತ್ರೆ
Sunday, January 18, 2026
ಶೀರೂರು ಪರ್ಯಾಯದ ಅದ್ದೂರಿ ಶೋಭಾಯಾತ್ರೆಯು ಜ.18ರ ಮುಂಜಾನೆ 5.30ರ ಸುಮಾರಿಗೆ ಸಂಪನ್ನಗೊಂಡಿತು.
ಅಲ್ಲಿಂದ ಮೆರವಣಿಗೆ ಆರಂಭಗೊಂಡು ಕೋರ್ಟ್ ರಸ್ತೆ, ಹಳೆ ಡಯನಾ ಸರ್ಕಲ್, ಐಡಿಯಲ್ ಸರ್ಕಲ್, ತೆಂಕಪೇಟೆ ಮಾರ್ಗವಾಗಿ ರಥಬೀದಿಗೆ ಸಾಗಿ ಬಂತು. ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸೇರಿದಂತೆ ಅಷ್ಟಮಠಗಳ ಯತಿಗಳು ವಾಹನದಲ್ಲಿರಿಸಿದ ಪಲ್ಲಕ್ಕಿಯಲ್ಲಿ ಕುಳಿತು ಸಾಗಿದರು.ಪರ್ಯಾಯ ಮೆರವಣಿಗೆಯನ್ನು ನೋಡಲು ರಸ್ತೆಯ ಇಕ್ಕೆಲಾಗಳಲ್ಲಿ ಜನಸ್ತೋಮ ಹರಿದುಬಂದಿತ್ತು.
