ಬ್ಲಿಂಕಿಟ್ ಇನ್ನು ಮುಂದೆ “10 ನಿಮಿಷಗಳಲ್ಲಿ” ತಲುಪುವ ಭರವಸೆಯಿಲ್ಲ!
Tuesday, January 13, 2026
ಬ್ಲಿಂಕಿಟ್ ಮತ್ತು ಜೆಪ್ಟೋನಂತಹ ಕ್ವಿಕ್ ಕಾಮರ್ಸ್ ಕಂಪನಿಗಳು ಸ್ವಯಂಪ್ರೇರಿತವಾಗಿ 10 ನಿಮಿಷಗಳ ಡೆಲಿವರಿ ಭರವಸೆಯನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿವೆ.
ಜೆಪ್ಟೋ ತನ್ನ ಬ್ರ್ಯಾಂಡಿಂಗ್‌ನಿಂದ 10 ನಿಮಿಷ ಡೆಲಿವರಿ ಭರವಸೆಯನ್ನು ತೆಗೆಯಲು ಒಪ್ಪಿಕೊಂಡ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ.
ಡೆಲಿವರಿ ಟೈಮ್‌ಲೈನ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮತ್ತು ಜೆಪ್ಟೋ, ಬ್ಲಿಂಕಿಟ್, ಜೊಮಾಟೋ ಮತ್ತು ಸ್ವಿಗ್ಗಿ ಸೇರಿದಂತೆ ಮುಖ್ಯ ಪ್ಲಾಟ್‌ಫಾರ್ಮ್‌ಗಳ ನಡುವೆ ಒಂದು ಸಭೆ ನಡೆದಿದೆ.
ಮೂಲಗಳ ಪ್ರಕಾರ, ಬ್ಲಿಂಕಿಟ್ ಈ ಆದೇಶವನ್ನು ಈಗಾಗಲೇ ಕಾರ್ಯಾನುಷ್ಠಾನ ಮಾಡಿ ತನ್ನ ಬ್ರ್ಯಾಂಡಿಂಗ್‌ನಿಂದ 10 ನಿಮಿಷ ಡೆಲಿವರಿ ಭರವಸೆಯನ್ನು ತೆಗೆದಿದ್ದು, ಇತರರೂ ಅನುಸರಿಸುವ ಸಾಧ್ಯತೆ ನಿಚ್ಚಳವಾಗಿದೆ.
ಗಿಗ್ ವರ್ಕರ್ ಗಳಿಗೆ ಹೆಚ್ಚಿನ ಸುರಕ್ಷತೆ, ಭದ್ರತೆ ಮತ್ತು ಸುಧಾರಿಸಿದ ಕೆಲಸದ ಸ್ಥಿತಿಗಳನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಗಿಗ್ ವರ್ಕರ್ ಗಳು ಉತ್ತಮ ವೇತನ ಮತ್ತು ಸುಧಾರಿತ ಕೆಲಸದ ವಾತಾವರಣ ಆಗ್ರಹಿಸುತ್ತಿದ್ದ ದಿನಗಳ ನಂತರ, ಈ ಕಂಪನಿಗಳಿಂದ ಈ ಪ್ರಮುಖ ಕ್ರಮ ಕೈಗೊಳ್ಳಲಾಗಿದೆ. ಹೊಸ ವರ್ಷದ ಮುನ್ನಾ ದಿನ ಗಿಗ್ ವರ್ಕರ್ ಗಳ ಒಂದು ವರ್ಗ ಈ ಬಗ್ಗೆ ಸಾಂಕೇತಿಕ ಪ್ರತಿಭಟನೆ ನಡೆಸಿತ್ತು. ಪರಿಣಾಮವಾಗಿ ಕಂಪನಿಗಳಿಂದ ಈ ಪ್ರಮುಖ ಕ್ರಮ ಕೈಗೊಳ್ಳಲಾಗಿದೆ.