ಅಲೆವೂರಿನ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ನಟ ರಕ್ಷಿತ್ ಶೆಟ್ಟಿ ಭಾಗಿ
Sunday, January 11, 2026
ನಟ ರಕ್ಷಿತ್ ಶೆಟ್ಟಿ ಅವರು ಉಡುಪಿ ತಾಲೂಕಿನ ಅಲೆವೂರಿನ ಕಲ್ಯಾಣ ನಗರದಲ್ಲಿ ನಡೆದ ನೇಮೋತ್ಸವದಲ್ಲಿ ಭಾಗಿಯಾದರು.
ಅಲೆವೂರು ದೊಡ್ಡಮನೆ ಮನೆತನದವರು ನಿರ್ವಹಿಸುವ ನೇಮೋತ್ಸವ ಇದು. ಅಲೆವೂರು ದೊಡ್ಡಮನೆ ಕುಟುಂಬದ ಕುಡಿ ಆಗಿರುವ ರಕ್ಷಿತ್ ಶೆಟ್ಟಿ ಅವರು ತಂದೆ ತಾಯಿ ಕುಟುಂಬಿಕರ ಜೊತೆ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಬಹಳ ಹೊತ್ತು ನೇಮೋತ್ಸವದಲ್ಲಿ ಕುಳಿತ ಬಳಿಕ ರಕ್ಷಿತ್ ಶೆಟ್ಟಿ ಅವರು ವಾಪಸಾದರು. ಸದ್ಯ ಮುಂಬರುವ ಸಿನಿಮಾಗಳ ಸ್ಕ್ರಿಪ್ಟ್ ಕೆಲಸದಲ್ಲಿ ರಕ್ಷಿತ್ ಶೆಟ್ಟಿ ಅವರು ಬ್ಯುಸಿಯಾಗಿದ್ದಾರೆ.
