ಶೀರೂರು ಪರ್ಯಾಯದ ಕರ್ತವ್ಯನಿರತ ಪೊಲೀಸರಿಗೆ ವಿಶೇಷ ಔತಣ (Video)
Saturday, January 17, 2026
ಉಡುಪಿಯ ನಾಡಹಬ್ಬವೆಂದೇ ಸಂಭ್ರಮಿಸುವ ಶೀರೂರು ಪರ್ಯಾಯಕ್ಕೆ ಭದ್ರತೆ ಒದಗಿಸುವ ಪೊಲೀಸರಿಗೆ ವಿಶೇಷ ಔತಣದ ವ್ಯವಸ್ಥೆ ಮಾಡಲಾಗಿದೆ.
ಜ. 17ರ ಮಧ್ಯಾಹ್ನ ಉಡುಪಿಯಲ್ಲಿ ಪರ್ಯಾಯ ಕರ್ತವ್ಯ ನಿರತ ಪೊಲೀಸರಿಗೆ ಉಡುಪಿಯ ಮಿಷನ್ ಕಂಪೌಂಡ್ ಬಳಿಯ ತಾತ್ಕಾಲಿಕ ಪಾಕಶಾಲೆಯಲ್ಲಿ ವಿವಿಧ ಬಗೆಯ ಖಾದ್ಯಗಳು, ಪಾಯಸ ಸಿದ್ದ ಮಾಡಲಾಗಿದೆ. ಪೊಲೀಸರ ಬೆಳಗಿನ ಉಪಾಹಾರಕ್ಕೆ ಶ್ಯಾವಿಗೆ ಪಲಾವು, ಉಪ್ಪಿಟ್ಟು, ಶೀರ ಮಾಡಲಾಗಿತ್ತು. ಇಂದು ಮಧ್ಯಾಹ್ನ(ಜ.17) ಚಪಾತಿ, ಘೀ ರೈಸ್, ಗ್ರೇವಿ, ಹೋಳಿಗೆ, ಅಪ್ಪಿ ಪಾಯಸ, ಕುಚ್ಚಲಕ್ಕಿ ಅನ್ನ, ಬೆಳ್ತಿಗೆ ಅನ್ನ ಹೀಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.
ಸುಮಾರು 14 ಜನ ಬಾಣಸಿಗರಿಂದ ಶ್ರೀಕೃಷ್ಣ ಮಠದ ಭೋಜನಶಾಲೆಯಲ್ಲಿ ಜ. 16ರಿಂದ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಮೂರು ದಿನ ಪೊಲೀಸರಿಗೆ ಮಠದ ವತಿಯಿಂದಲೇ ಭೋಜನದ ವ್ಯವಸ್ಥೆ ಇದ್ದು, ಜ.18ರ ಬೆಳಗ್ಗೆ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಮಧ್ಯಾಹ್ನ ಕೃಷ್ಣಮಠದಲ್ಲಿ ಪೊಲೀಸರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಪರ್ಯಾಯದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಭದ್ರತೆಗಾಗಿ 1500 ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಹೀಗಾಗಿ ಪೊಲೀಸರಿಗೆ ಸರಿಯಾದ ಸಮಯದಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಬೇಕೆನ್ನುವ ಉದ್ದೇಶದಿಂದ ಈ ಬಾರಿಯ ಪರ್ಯಾಯಕ್ಕೆ ಸ್ವಾಗತ ಸಮಿತಿಯ ಮುತುವರ್ಜಿಯಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ.
.jpeg)


.jpeg)
