ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ಹುಟ್ಟೂರಿನಲ್ಲಿ ಭರ್ಜರಿ ಸ್ವಾಗತ(video)
Wednesday, January 21, 2026
ಬಿಗ್‌ಬಾಸ್ ಕನ್ನಡ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ಅವರಿಗೆ ಹುಟ್ಟೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಮೆರವಣಿಗೆ ಸಂದರ್ಭದಲ್ಲಿ ಕೈಯಲ್ಲಿ ಬಂಗುಡೆ ಮೀನು ಹಿಡಿದು ರಕ್ಷಿತಾ ಶೆಟ್ಟಿ ಸಂಭ್ರಮಿಸಿದ್ದಾರೆ.
ಹೆಜಮಾಡಿ ಟೋಲ್‌ನಿಂದ ಪಡುಬಿದ್ರೆಯವರೆಗೆ ರಕ್ಷಿತಾ ಶೆಟ್ಟಿ ಅವರನ್ನು ಮೆರವಣಿಗೆಯೊಂದಿಗೆ ಕರೆ ತಂದರು. ತೆರೆದ ವಾಹನ ಏರಿದ ರಕ್ಷಿತಾ ಅವರು ಅಭಿಮಾನಿಗಳಿಗೆ ಕೈ ಬೀಸಿದರು.ರಕ್ಷಿತಾ ಬರುವ ವಿಚಾರ ತಿಳಿದು ನೂರಾರು ಜನ ಹೆಜಮಾಡಿ ಟೋಲ್‌ನಲ್ಲಿ ಸೇರಿದ್ದರು. ನಂತರ ರಕ್ಷಿತಾ ಅವರ ವಾಹನದ ಜೊತೆಗೆ ಅಭಿಮಾನಿಗಳು ಹೆಜ್ಜೆ ಹಾಕಿದರು.
