ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಪತ್ತೆ
Friday, January 16, 2026
ಇಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಪತ್ತೆಯಾಗಿದ್ದಾರೆ.
ಶಿವಳ್ಳಿ ಗ್ರಾಮದ ಕುಂಜಿಬೆಟ್ಟುವಿನ ಸಂತೋಷ ನಗರ ನಿವಾಸಿ ಸಂಜೀವ ಎಂಬವರ ಪತ್ನಿ ಮಂಜುಳಾ(22), ಮಕ್ಕಳಾದ ಸಮೀಕ್ಷಾ(4) ಮತ್ತು ಅಪೇಕ್ಷಾ(2) ನಾಪತ್ತೆಯಾಗಿದ್ದರು. ಸಂಜೀವ ಅವರು ಶಬರಿಮಲೆ ಯಾತ್ರೆಗೆ ತೆರಳಿದ್ದ ವೇಳೆ ಜ.13ರಂದು 10 ಗಂಟೆಯಿOದ ಜ.14ರ ಬೆಳಗ್ಗೆ 5 ಗಂಟೆ ಅವಧಿಯಲ್ಲಿ ನಾಪತ್ತೆಯಾಗಿದ್ರು. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಲಾಗಿತ್ತು. ಮಹಿಳೆ ಹಾಗೂ ಮಕ್ಕಳು ಆಕೆಯ ತವರು ಮನೆಯಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.