ಟ್ರಕ್ ಚಕ್ರದಡಿ ಸಿಲುಕಿ ಬೈಕ್ ಸವಾರನ ದಾರುಣ ಅಂತ್ಯ
Friday, January 23, 2026
ಉಡುಪಿಯ ರಾಷ್ಟ್ರೀಯ ಹೆದ್ದಾರಿಯ ಉಪ್ಪೂರು ಕೆ.ಜಿ ರೋಡ್ ಬಳಿ ಬೈಕ್ ಸವಾರ ಟ್ರಕ್ಕಿನ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಸಾವನಪ್ಪಿದ ಭೀಕರ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಚಕ್ರದಡಿ ಸಿಲುಕಿದ ಬೈಕ್ ಸವಾರನ ದೇಹವು ಛಿದ್ರಗೊಂಡಿದ್ದು, ದೇಹದಿಂದ ರುಂಡ ಬೆರ್ಪಟ್ಟು ಚಕ್ರದಡಿ ಸಿಲುಕಿಕೊಂಡಿರುವ ಭೀಕರ ದೃಶ್ಯವು ಮನಕಲಕುವಂತಿತ್ತು. ಮೃತ ಸವಾರ ಬ್ರಹ್ಮಾವರ ಮಟಪಾಡಿಯ ನಿವಾಸಿ ಅಭಿಷೇಕ್(25)ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಬ್ರಹ್ಮಾವರ ಆರಕ್ಷಕ ಠಾಣೆಯ ಮುಖ್ಯ ಆರಕ್ಷಕ ಮಹಾಲಿಂಗ ಮಹಜರು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಮತ್ತು ಬ್ರಹ್ಮಾವರದ ಅಂಬುಲೆನ್ಸ್ ಚಾಲಕ ಶವವನ್ನು ತೆರವು ಮಾಡಲು ನೆರವಾದರು.