ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ "ಆಭಾ" ನೃತ್ಯ ಪ್ರದರ್ಶನ
Friday, January 23, 2026
ಉಡುಪಿಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ನಿಮಿತ್ತ ರಾಜಾಂಗಣದಲ್ಲಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುವಾರ ರಾತ್ರಿ ರಾಮಾಯಣ ಕಥೆ ಆಧಾರಿತ 'ಆಭಾ' ನೃತ್ಯ ಕಾರ್ಯಕ್ರಮ ನಡೆಯಿತು.
ಖ್ಯಾತ ನೃತ್ಯಗುರು ಬೆಂಗಳೂರಿನ ಪಾರ್ಶ್ವನಾಥ ಉಪಾಧ್ಯೆ ಹಾಗೂ ಸಹ ಕಲಾವಿದರಾದ ಶ್ರುತಿ ಗೋಪಾಲ್, ಆದಿತ್ಯ ಪಿ.ವಿ. ಮನೋಜ್ಞವಾಗಿ ಪ್ರದರ್ಶಿಸಿದರು. ಹಾಡುಗಾರಿಕೆಯಲ್ಲಿ ರೋಹಿತ್ ಭಟ್ ಉಪ್ಪೂರು, ಮೃದಂಗದಲ್ಲಿ ಹರ್ಷ ಸಾಮಗ ಮಲ್ಪೆ, ವಯೋಲಿನ್ ನಲ್ಲಿ ಪ್ರಾದೇಶ್ ಆಚಾರ್, ಕೊಳಲಿನಲ್ಲಿ ಮಹೇಶ್ ಸ್ವಾಮಿ, ತಾಳದಲ್ಲಿ ಶೋಭಿತ್ ರಮೇಶ್ ಅವರು ವಾದ್ಯ ಸಹಕಾರ ನೀಡಿದರು. ನೃತ್ಯಗುರು ಸುಧೀರ್ ಕೊಡವೂರು ಎಲ್ಲ ಕಲಾವಿದರನ್ನು ಶ್ರೀಕೃಷ್ಣ ಮಠದ ಪರವಾಗಿ ಸ್ವಾಗತಿಸಿ, ಪ್ರೇಕ್ಷಕರಿಗೆ ಪರಿಚಯಿಸಿದರು.
.jpeg)
.jpeg)

.jpeg)
.jpeg)

.jpeg)



.jpeg)
