-->
 ಇನ್ಮುಂದೆ ರಾಜ್ಯಪಾಲರ ನಿವಾಸ ರಾಜಭವನವಲ್ಲ, "ಲೋಕಭವನ"

ಇನ್ಮುಂದೆ ರಾಜ್ಯಪಾಲರ ನಿವಾಸ ರಾಜಭವನವಲ್ಲ, "ಲೋಕಭವನ"



ಕೇಂದ್ರ ಗೃಹ ಸಚಿವಾಲಯದ ತೀರ್ಮಾನದಂತೆ ದೇಶದಾದ್ಯಂತ ಇರುವ ರಾಜಭವನಗಳ ಹೆಸರನ್ನು ಅಧಿಕೃತವಾಗಿ ‘ಲೋಕಭವನ’ ಎಂದು ಮರುನಾಮಕರಣ ಮಾಡಲಾಗಿದೆ.

ಬ್ರಿಟಿಷ್ ಆಳ್ವಿಕೆಯಲ್ಲಿ, ರಾಜ್ಯಪಾಲರ ನಿವಾಸಗಳನ್ನು ರಾಜ್ಯಪಾಲರ ಭವನಗಳು ಎಂದು ಕರೆಯಲಾಗುತ್ತಿತ್ತು. ಇದಾದ ನಂತರ ಅಂದರೆ ಸ್ವಾತಂತ್ರ‍್ಯದ ನಂತರ, ಅವುಗಳನ್ನು ಅಂದಿನ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ಅವರು ರಾಜಭವನಗಳು ಎಂದು ಮರುನಾಮಕರಣ ಮಾಡಿದ್ದರು. ಇದೀಗ ರಾಜಭವನ ಬದಲಿಗೆ ಲೋಕ ಭವನ ಎಂದು ಮರುನಾಮಕರಣ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. 

ಕೇಂದ್ರದ ಆದೇಶವನ್ನು ರಾಜ್ಯಗಳಿಗೆ ತಲುಪಿಸಿದ್ದು, ರಾಜ್ಯಪಾಲರ ಕಚೇರಿಗಳು ಇನ್ನು ಮುಂದೆ ‘ಲೋಕಭವನ’ ಹೆಸರಿನಲ್ಲಿ ಕಾರ್ಯನಿರ್ವಹಿಸಲಿವೆ. ಕೇಂದ್ರ ಗೃಹ ಇಲಾಖೆಯ ಆದೇಶದನ್ವಯ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ಪತ್ರ ಬರೆದು, ಹೆಸರು ಬದಲಾವಣೆಯ ಆದೇಶವನ್ನು ತಕ್ಷಣದಿಂದ ಜಾರಿಗೆ ತರಲು ಸೂಚಿಸಿದ್ದಾರೆ.

ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳು, ಸರ್ಕಾರಿ ಆದೇಶಗಳು, ಅಧಿಕೃತ ಪತ್ರ ವ್ಯವಹಾರಗಳು, ವೆಬ್ಸೈಟ್ಗಳು ಹಾಗೂ ಫಲಕಗಳಲ್ಲಿ ‘ರಾಜಭವನ’ ಬದಲು ‘ಲೋಕಭವನ’ ಎಂಬ ಹೆಸರು ಬಳಸಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ.

ರಾಜಭವನ ಎಂಬ ಹೆಸರು ದೀರ್ಘಕಾಲದಿಂದ ರಾಜ್ಯಪಾಲರ ಅಧಿಕೃತ ನಿವಾಸ ಮತ್ತು ಕಚೇರಿಯನ್ನು ಸೂಚಿಸುತ್ತಿದ್ದರೂ ಕೇಂದ್ರ ಗೃಹ ಇಲಾಖೆಯ ಹೊಸ ನಿರ್ಧಾರದಿಂದಾಗಿ ಈಗ ಆಡಳಿತಾತ್ಮಕ ದಾಖಲೆಗಳಿಂದ ಹಿಡಿದು ಸಾರ್ವಜನಿಕ ಹೆಸರಿನ ಫಲಕಗಳವರೆಗೂ ಎಲ್ಲವೂ ಬದಲಾಗಲಿವೆ. 

Ads on article

Advertise in articles 1

advertising articles 2

Advertise under the article