-->
 ವೀಡಿಯೋ ವೈರಲ್ ಮಾಡಿ ಯುವಕನ ಸಾವಿಗೆ ಕಾರಣಳಾದ ಯುವತಿ ಜಾಮೀನು ಅರ್ಜಿ ವಜಾ

ವೀಡಿಯೋ ವೈರಲ್ ಮಾಡಿ ಯುವಕನ ಸಾವಿಗೆ ಕಾರಣಳಾದ ಯುವತಿ ಜಾಮೀನು ಅರ್ಜಿ ವಜಾ


ಬಸ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ವಿಡಿಯೋ ತೆಗೆದು ವೈರಲ್ ಮಾಡಿ ಯುವಕನ ಸಾವಿಗೆ ಕಾರಣಳಾಗಿದ್ದ ಶಿಮ್ಜಿತಾ ಮುಸ್ತಫಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

ಕೇರಳದ ಕೋಝಿಕ್ಕೋಡ್‌ನಲ್ಲಿರುವ ಕುನ್ನಮಂಗಲO ಜ್ಯುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಂಗಳವಾರ ಶಿಮ್ಜಿತಾ ಮುಸ್ತಫಾ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಮ್ಯಾಜಿಸ್ಟ್ರೇಟ್ ಎಂ. ಅಥಿರಾ, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಮತ್ತು ಆರೋಪಿಗಳನ್ನು ಬಿಡುಗಡೆ ಮಾಡುವುದರಿಂದ ಸಾಕ್ಷ್ಯಗಳನ್ನು ತಿರುಚುವ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಪ್ರಾಸಿಕ್ಯೂಷನ್‌ಗೆ ಒಪ್ಪಿಗೆ ಸೂಚಿಸಿದರು. 

ಇದಲ್ಲದೆ, ತನಿಖಾಧಿಕಾರಿಗಳು ಆಕೆಯ ಮೊಬೈಲ್ ಫೋನ್‌ನ ವಿಧಿವಿಜ್ಞಾನ ವಿಶ್ಲೇಷಣೆಯನ್ನು ಪಡೆಯಬೇಕಾಗುತ್ತದೆ. ಶಿಮ್ಜಿತಾಗೆ ದೀಪಕ್ ಜೊತೆ ಈ ಹಿಂದೆ ಯಾವುದೇ ಪರಿಚಯವಿರಲಿಲ್ಲ ಎಂಬುದನ್ನೂ ಒಳಗೊಂಡOತೆ ಪ್ರತಿವಾದಿ ವಕೀಲರ ವಾದಗಳನ್ನು ಸ್ವೀಕರಿಸಲು ನ್ಯಾಯಾಲಯ ನಿರಾಕರಿಸಿತು. ಜನವರಿ 17 ರಂದು ಕೋಝಿಕ್ಕೋಡ್ ಮೂಲದ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ದೀಪಕ್ ಬಸ್ ನಲ್ಲಿ ಲೈಂಗಿಕ ದೌರ್ಜನ್ಯ ನೀಡಿದ್ದಾನೆ ಎಂದು ಶಿಮ್ಜಿತಾ ಮುಸ್ತಫಾ ವಿಡಿಯೋ ಮಾಡಿ ಅದನ್ನು ವೈರಲ್ ಮಾಡಿದ್ದರು, ಆದರೆ ವಿಡಿಯೋದಲ್ಲಿ ಯಾವುದೇ ರೀತಿಯ ದೌರ್ಜನ್ಯ ಕಾಣಿಸಿದ ಹಿನ್ನಲೆ ಸಾರ್ವಜನಿಕವಾಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು, ಬಳಿಕ ಜನವರಿ 19 ರಂದು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಪೊಲೀಸರು ಶಿಂಜಿತಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದರು. 

ಜನವರಿ 21 ರಂದು ವಡಕರದಲ್ಲಿರುವ ಸಂಬOಧಿಕರ ಮನೆಯಿಂದ ಅವರನ್ನು ಶಿಮ್ಜಿತಾ ಅವರನ್ನು ವಶಕ್ಕೆ ಪಡೆಯಲಾಯಿತು. ಮರುದಿನ, ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ರಿಮಾಂಡ್ ಮಾಡಿತು. ಶಿಮ್ಜಿತಾ ಅವರು ಪ್ರಸ್ತುತ ಮಂಜೇರಿ ಸಬ್ ಜೈಲಿನಲ್ಲಿದ್ದಾರೆ.




Ads on article

Advertise in articles 1

advertising articles 2

Advertise under the article