ಸರ್ಕಾರಿ ಅಧಿಕಾರಿ, ನೌಕರರಿಗೆ ಖಾದಿ ಬಟ್ಟೆ ಕಡ್ಡಾಯ..!
Thursday, January 29, 2026
ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಇನ್ನು ಮುಂದೆ ವಾರದ ನಿರ್ದಿಷ್ಟ ದಿನದಂದು ಕಡ್ಡಾಯಾಗಿ ಖಾದಿ ಬಟ್ಟೆ ಧರಿಸಬೇಕೆನ್ನುವ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲು ಮುಂದಾಗಿದೆ.
ಪ್ರತೀ ತಿಂಗಳ ಮೊದಲ ಶುಕ್ರವಾರ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಕಡ್ಡಾಯವಾಗಿ ಖಾದಿ ಉಡುಪು ಧರಿಸಬೇಕು. ಅಲ್ಲದೇ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಖಾದಿ ಬಟ್ಟೆ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲು ಸಭೆ ಕರೆಯಲಾಗಿದೆ. ಈಗಾಗಲೇ ಸರ್ಕಾರವು ಹರಿದ ಜೀನ್ಸ್ ಮತ್ತು ಸ್ಲೀವ್‌ಲೆಸ್ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿ, ಕಚೇರಿಗಳಲ್ಲಿ ಸಭ್ಯ ವಸ್ತ್ರ ಸಂಹಿತೆ ಪಾಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದೀಗ ಖಾದಿ ಬಟ್ಟೆ ಕಡ್ಡಾಯಗೊಳಿಸುವಂತೆಯೂ ನಿರ್ಧಾರ ಕೈಗೊಳ್ಳಲು ಸಭೆ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.