-->
ಮಲ್ಪೆ ಬೋಟ್ ದುರಂತ; ಚಿಕಿತ್ಸೆ ಫಲಿಸದೇ ಮತ್ತೊರ್ವ ಯುವತಿ ಸಾವು

ಮಲ್ಪೆ ಬೋಟ್ ದುರಂತ; ಚಿಕಿತ್ಸೆ ಫಲಿಸದೇ ಮತ್ತೊರ್ವ ಯುವತಿ ಸಾವು


ಉಡುಪಿಯ ಡೆಲ್ಟಾ ಬೀಚ್ ಬಳಿ ಸಂಭವಿಸಿದ ಪ್ರವಾಸಿ ಬೋಟ್ ದುರಂತದಲ್ಲಿ ಮೈಸೂರಿನ ಮತ್ತೋರ್ವ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಆ ಮೂಲಕ ಮೃತರ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ. ಮೈಸೂರಿನ ದಿಶಾ(23) ಮೃತ ಯುವತಿ. ನಿನ್ನೆ ಸಿಂಧು ಮತ್ತು ಶಂಕರಪ್ಪ ಎಂಬುವವರು ಮೃತಪಟ್ಟಿದ್ದರು. ಸದ್ಯ ಧರ್ಮರಾಜ್ ಎಂಬ ಯುವಕ‌ನಿಗೆ ಚಿಕಿತ್ಸೆ ಮುಂದುವರೆದಿದೆ. ಮೈಸೂರು ಬಿಪಿಒ ಕಾಲ್‌ಸೆಂಟರ್‌ನ 28 ಉದ್ಯೋಗಿಗಳು 2 ಬೋಟ್‌ಗಳಲ್ಲಿ ತೆರಳಿದ್ದಾಗ ಒಂದು ಬೋಟ್ ಸಮುದ್ರಪಾಲಾಗಿತ್ತು.ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article