ಜುಗಾರಿ ಅಡ್ಡೆಗೆ ದಾಳಿ; 5 ಮಂದಿಯ ಬಂಧನ
ಮಲ್ಪೆ ಸಮೀಪದ ಕಡೆಕಾರು ಗ್ರಾಮದ ಸೀ ವ್ಯೂ ರೆಸಾರ್ಟ್ ಸಮೀಪ ಕಡೆಕಾರ್ ಪಡುಕೆರೆ ಹೊಳೆಯ ಕಡುವಿನ ಬಾಗಿಲು ಬಳಿ ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ.
ಉಳ್ಳಾಲ ಅಂಬ್ಲಮೊಗರು ನಿವಾಸಿ ನಿತಿನ್ ರಾಜ್(35), ಕಾಪು ಪಲಿಮಾರು ನಿವಾಸಿ ಸಚಿನ್ ಆರ್ ಶೆಟ್ಟಿ (35), ಕಂಕನಾಡಿ ನಿವಾಸಿ ಸತೀಶ್ @ ಕಿಶೋರ್(38), ಸುರತ್ಕಲ್ ತಡಂಬೈಲು ನಿವಾಸಿ ರಂಜಿತ್ ಕೆ ಅಮೀನ್(39), ಸುರತ್ಕಲ್ ಸದಾಶಿವನಗರ ನಿವಾಸಿ ರವಿ(36) ಬಂಧಿತರು.
ಇನ್ನೋರ್ವ ಆರೋಪಿ ಉದ್ಯಾವರದ ಕಿಶೋರ ಪರಾರಿಯಾಗಿದ್ದಾನೆ. ಮಲ್ಪೆ ಠಾಣಾ ಪಿಎಸ್‌ಐ ಈರಣ್ಣ ಶಿರಗುಂಪಿ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದಾರೆ. ಬಂಧಿತರಿAದ ಇಸ್ಪೀಟ್ ಎಲೆಗಳು, 500 ರ ಮುಖ ಬೆಲೆಯ 3,90,000 ಮೌಲ್ಯದ ಒಟ್ಟು 780 ನೋಟುಗಳು, 100 ರೂ. ಮುಖ ಬೆಲೆಯ 1,00,400 ರೂ ಮೌಲ್ಯದ ಒಟ್ಟು 1004 ನೋಟುಗಳು, 200 ರ ಮುಖ ಬೆಲೆಯ 400 ರೂ ಮೌಲ್ಯದ 2 ನೋಟುಗಳು ಸೇರಿದಂತೆ 4,90,920 ರೂಪಾಯಿ ನಗದು, 5 ಮೊಬೈಲ್ ಫೋನ್, ಕಾರು ಸಹಿತ ಒಟ್ಟು 30,00,000 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 17/2026, ಕಲಂ: 112 BNS 2023, 87 KP Act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.