ಗಂಡು ಮಗುವಿಗೆ ಜನ್ಮ ನೀಡಿದ ಕರಾವಳಿ ಹೆಣ್ಣು ಹುಲಿ ಸುಷ್ಮಾ ರಾಜ್
Tuesday, February 10, 2026
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಕರಾವಳಿಯ ಹೆಣ್ಣು ಹುಲಿ ಎಂದೇ ಪ್ರಸಿದ್ದರಾದ ಸುಷ್ಮಾ ರಾಜ್ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿಗೆ ತಾಯಿಯಾಗಿರುವ ವಿಷಯವನ್ನು ಸುಷ್ಮಾ ರಾಜ್ ಅವರು ತಮ್ಮ ಸೋಷಿಯಲ್ ಮೀಡಿಯಾದ ಮೂಲಕ ಹಂಚಿಕೊOಡಿದ್ದಾರೆ.
ಇತ್ತೀಚೆಗಷ್ಟೇ ಸೀಮಂತ ಮಾಡಿಕೊಂಡಿದ್ದ ಸುಷ್ಮಾ ರಾಜ್ ಅವರ ‘ಹುಲಿ ಮತ್ತು ಹುಲಿ ಮರಿ’ ಥೀಮ್ೆಲ್ಲೆಡೆ ವೈರಲ್ ಆಗಿತ್ತು. ಹಾಲ್‌ನಲ್ಲಿ ಹುಲಿ ಹಾಗೂ ಮರಿ ಚಿತ್ರಗಳು ಅಲಂಕರಿಸಿದರೆ, ಸುಷ್ಮಾ ಹೊಟ್ಟೆಯ ಮೇಲೂ ವಿಶಿಷ್ಟವಾಗಿ ಹುಲಿ ಮರಿ ಚಿತ್ರ ಬಿಡಿಸಲಾಗಿತ್ತು. ತಂದೆಯೇ ಮಲಿ ಹುಲಿಯಾಗಿ ಮರಳಿ ಬರಲಿದ್ದಾನೆ ಎಂಬ ಭಾವನಾತ್ಮಕ ನಂಬಿಕೆಯನ್ನು ಕುಟುಂಬಸ್ಥರು ಇಟ್ಟುಕೊಂಡಿದ್ದರು. ಅದರಂತೆ ಸುಷ್ಮಾರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯೇ ಮಗನಾಗಿ ಮರುಜನ್ಮ ತಾಳಿದ್ದಾರೆ ಎಂದು ಕುಟುಂಬಸ್ಥರು ಭಾವನಾತ್ಮಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಕನ್ನಡದ ಕೆಲ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಸುಷ್ಮಾ ರಾಜ್ ಹುಲಿ ಕುಣಿತದಲ್ಲಿಯೇ ಜನಪ್ರಿಯತೆ ಪಡೆದಿದ್ದರು. ಸುಷ್ಮಾ ರಾಜ್ ಅವರ ತಂದೆ ಅಶೋಕ್ ರಾಜ್ ಸುಮಾರು 35 ವರ್ಷಗಳಿಂದ ಹುಲಿ ಕುಣಿತ ತರಬೇತಿ ನೀಡುತ್ತಿದ್ದು, ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ತಂದೆಯOತೆ ಮಗಳು ಸುಷ್ಮಾ ರಾಜ್ ಹುಲಿ ಕುಣಿತದಲ್ಲಿ ಪಳಗಿದ್ದರು.
ಸುಷ್ಮಾ ರಾಜ್ ಮೇ 2024ರಲ್ಲಿ ನಿಶಾನ್ ನರೇಂದ್ರ ಎಂಬುವವರನನ್ನು ಪ್ರೀತಿಸಿ ಮದುವೆ ಆಗಿದ್ದರು. ಸುಷ್ಮಾ ರಾಜ್ ಪತಿ ಜಿಮ್ ಟ್ರೈನರ್ ಆಗಿದ್ದಾರೆ. ಅಲ್ಲದೇ ಬಾಡಿ ಬಿಲ್ಡಿಂಗ್ ನಲ್ಲಿ ಹೆಸರು ಮಾಡಿದ್ದಾರೆ.

