ಸಂಚಾರ ನಿಯಮ ಉಲ್ಲಂಘಿಸಿ ಕರ್ಕಶ ಹಾರ್ನ್ ಬಳಕೆ ವಿರುದ್ಧ ಕಾರ್ಯಾಚರಣೆ (Video)
Saturday, February 07, 2026
ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಸುಮಾರು 120 ಬೈಕ್ ಗಳಲ್ಲಿ ಅಳವಡಿಸಲಾಗಿರುವ ಡಿಫೆಕ್ಟಿವ್ ಸೈಲೆನ್ಸರ್‌ಗಳನ್ನು ರೋಡ್ ರೋಲರ್ ಬಳಸಿ ಧ್ವಂಸಗೊಳಿಸಲಾಯಿತು.
ಮಣಿಪಾಲ ಠಾಣ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಕರ್ಕಶ ಹಾರ್ನ್ ಬಳಕೆಯ ವಿರುದ್ಧ ಮಣಿಪಾಲ ಠಾಣ ಇನ್ಸ್ಕಾ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆರು ತಿಂಗಳಲ್ಲಿ ಒಟ್ಟು 120 ಡಿಫೆಕ್ಟಿವ್ ಸೈಲೆನ್ಸರ್‌ಗಳನ್ನು ಪತ್ತೆ ಹಚ್ಚಿ ,120 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ 120 ಪ್ರಕರಣಗಳಲ್ಲಿ ಒಟ್ಟು ರೂ.1,05,000 ದಂಡವನ್ನು ವಸೂಲಿ ಮಾಡಲಾಗಿದೆ.
ವಶಕ್ಕೆ ಪಡೆದಿರುವ 120 ಡಿಫೆಕ್ಟಿವ್ ಸೈಲೆನ್ಸರ್ ಗಳನ್ನು , ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ರೋಡ್ ರೋಲರ್ ಬಳಸಿ ಧ್ವಂಸಗೊಳಿಸಲಾಯಿತು. ಈ ವೇಳೆ ಮಣಿಪಾಲ ಠಾಣಾ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.
