ಖಾದರ್ ಗ್ಯಾರಂಟಿ; ಪ್ರಮಾಣ ವಚನ ಸ್ವೀಕರಿಸಲಿರುವ ಏಕೈಕ ಮಹಿಳೆ ಯಾರು?
Tuesday, June 02, 2026
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸುವ ವೇಳೆ, ಇತರ 10 ಮಂದಿ ಶಾಸಕರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವುದಾಗಿ ತಿಳಿದು ಬಂದಿದೆ.
ಈ 10 ಮಂದಿಯ ಪೈಕಿ ಓರ್ವ ಮಹಿಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕೋಲಾರ ಕ್ಷೇತ್ರದಿಂದ 7 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ, ಪ್ರಸ್ತುತ ಶಾಸಕರಾಗಿರುವ ಕೆ.ಎಚ್. ಮುನಿಯಪ್ಪ ಅವರನ್ನು ಸಚಿವರನ್ನಾಗಿ ಮಾಡಬೇಕೆಂಬ ತೀವ್ರ ಒತ್ತಡವಿದ್ದರೂ, ಅವರ ಬದಲಿಗೆ ಅವರ ಪುತ್ರಿ ಕೋಲಾರ ಜಿಲ್ಲೆಯ ಕೆಜಿಎಫ್ (Kolar Gold Mines) ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ಅವರು ಸಚಿವರಾಗುವುದು ಬಹುತೇಕ ಖಚಿತವಾಗಿದೆ.
ಪ್ರಮಾಣ ವಚನ ಸ್ವೀಕರಿಸಲಿರುವ ಇತರರು:
ಡಾ. ಜಿ. ಪರಮೇಶ್ವರ,
ಕೆ. ಜೆ. ಜಾರ್ಜ್, ಡಾ. ಯತೀಂದ್ರ,
ಪ್ರಿಯಾಂಕ್ ಖರ್ಗೆ, ಎಂ ಬಿ ಪಾಟೀಲ್, ಸತೀಶ್ ಜಾರಕಿಹೊಳಿ
ಕೃಷ್ಣ ಭೈರೇಗೌಡ, ರಾಮಲಿಂಗಾ ರೆಡ್ಡಿ, ಯು.ಟಿ. ಖಾದರ್.