ಅಧಿವಕ್ತ ಪರಿಷತ್ ವತಿಯಿಂದ ನ್ಯಾಯಧೀಶರಾಗಿ ಆಯ್ಕೆಯಾದವರಿಗೆ ಅಭಿನಂದನೆ
ಉಡುಪಿ ಜಿಲ್ಲಾ ವಕೀಲರ ಸಂಘದಿಂದ ಜೆ.ಎಮ್.ಎಫ್.ಸಿ ನ್ಯಾಯಧೀಶರಾಗಿ ಆಯ್ಕೆಯಾದ ಸುಕೇಂದ್ರ ಇವರಿಗೆ ಉಡುಪಿ ಜಿಲ್ಲಾ ಅಧಿವಕ್ತ ಪರಿಷತ್ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಅಧಿವಕ್ತ ಪರಿಷತ್ ಅಧ್ಯಕ್ಷರಾದ ಸಂತೋಷ್ ಹೆಬ್ಬಾರ್ ಅವರು ಪ್ರಾಸ್ತವಿಕವಾಗಿ ಮಾತನಾಡಿದರು.
ಉಡುಪಿ ವಕೀಲರ ಸಂಘದ ಮಾಜಿ ಕಾರ್ಯದರ್ಶಿಯಾದ ರಾಜೇಶ್ ಎ.ಆರ್ ಅಭಿನಂದನ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಅಧಿವಕ್ತ ಪರಿಷತ್ ಪದಾಧಿಕಾರಿ ಹಾಗೂ ನ್ಯಾಯವಾದಿ ಶಶೀಕಲಾ ತೋನ್ಸೆ, ಬ್ರಹ್ಮಾವರ ವಕೀಲರ ಸಂಘದ ಉಪಾಧ್ಯಕ್ಷರಾದ ಕರ್ಜೆ ಬಾಲಕ್ರಷ್ಣ ಶೆಟ್ಟಿ, ಉಡುಪಿ ವಕೀಲರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಎಸ್.ಪಿ ಏಳಿಂಜೆ, ವಕೀಲರ ಸಂಘದ ಮಾಜಿ ಜೊತೆ ಕಾರ್ಯದರ್ಶಿ ರವೀಂದ್ರ ಬೈಲೂರು ,ನಾಗರಾಜ್ ಕಿನ್ನಿಮೂಲ್ಕಿ, ಆಶಿಶ್ ಶೆಟ್ಟಿ ಬೋಳ, ಸುಚಿತ ಶೆಟ್ಟಿ, ಕಾವ್ಯ ನಾಯ್ಕ್ , ಮೇಘನಾ, ಸುಚೇತಾ ಶೆಟ್ಟಿ,ಶ್ರೀ ಜಯಂತ್ ರಾವ್, ಪೆಲಾತ್ತೂರು ರೋಹಿತ್ ಆಚಾರ್ಯ , ಶ್ರೀನಿಧಿ ಸುವರ್ಣ, ಪ್ರಸನ್ನ ಶೆಣೈ, ಲೀವನ್ ಪ್ಲಾ ಮತ್ತು ಇತರರು ಉಪಸ್ಥಿತರಿದ್ದರು .
ವಕೀಲರ ಸಂಘದ ಮಾಜಿ ಸಾಂಸ್ಕತಿಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮೂಡುಬೆಳ್ಳೆ ನಿರೂಪಿಸಿದರು .
ಜಿಲ್ಲಾ ಅಧಿವಕ್ತ ಪರಿಷತ್ ಪ್ರಧಾನ ಕಾರ್ಯದರ್ಶಿ ಆರೂರು ಸುಕೇಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು