-->
ಮಣಿಪಾಲ: ಗೂಂಡಾ ಕಾಯ್ದೆಯಡಿ  ರೌಡಿ  ಗಣೇಶ್‌ ಬಂಧನ

ಮಣಿಪಾಲ: ಗೂಂಡಾ ಕಾಯ್ದೆಯಡಿ ರೌಡಿ ಗಣೇಶ್‌ ಬಂಧನ


ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣಾ ಸರಹದ್ದಿನ ರೌಡಿ ಆಸಾಮಿ,  ಬಡಗಬೆಟ್ಟು ಗ್ರಾಮದ ನೇತಾಜಿನಗರ 04 ನೇ ಅಡ್ಡರಸ್ತೆ ನಿವಾಸಿ ಗಣೇಶ್‌ (32)ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ.

ಗಣೇಶನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಪೊಲೀಸ್‌ ಅಧೀಕ್ಷಕರ ವರದಿಯ ಮೇರೆಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಗೂಂಡಾ ಆಸಾಮಿಯ ವಿರುದ್ದ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕೊಲೆಯತ್ನ, ಹಲ್ಲೆ, ಅಕ್ರಮ ಕೂಟ, ಮಹಿಳೆಯರ ಮೇಲೆ ದೌರ್ಜನ್ಯ, ಕಳ್ಳತನ ಸಹಿತ ಒಟ್ಟು 01 ಪ್ರಕರಣಗಳು ದಾಖಲಾಗಿರುತ್ತದೆ. ಅವುಗಳ ಪೈಕಿ 03 ಪ್ರಕರಣಗಳು ಖುಲಾಸೆ, 04 ಪ್ರಕರಣ ನ್ಯಾಯಾಂಗ ವಿಚಾರಣೆ ಹಾಗೂ ಉಳಿದ 2 ಪ್ರಕರಣಗಳು ತನಿಖೆಯಲ್ಲಿರುತ್ತದೆ.

ಬಂಧಿತ ಆರೋಪಿಯನ್ನು ಕಲಬುರ್ಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶಿಸಲಾಗಿದೆ.

Ads on article

Advertise in articles 1

advertising articles 2

Advertise under the article