ಜೂ.7: ಮಾನ್ಸೂನ್ ಕ್ರಾಸ್ ಕಂಟ್ರಿ ಮತ್ತು ಕಿಡ್ಸ್ ಅಥ್ಲೆಟಿಕ್ ಮೀಟ್ 2026
ಚಾಲೆಂಜರ್ಸ್ ಅಥ್ಲೆಟಿಕ್ ಕ್ಲಬ್ ಉಡುಪಿ ಇವರ ವತಿಯಿಂದ ಸಿಟಿ ಎಜುಕೇಷನ್ ಟ್ರಸ್ಟ್ (ರಿ), ಉಡುಪಿ & ವಿದ್ಯಾರತ್ನ ಕಾಲೇಜ್ ಆಫ್ ನರ್ಸಿಂಗ್, ಉಡುಪಿ, ಪೋದಾರ್ ಇಂಟರ್ನ್ಯಾಷನಲ್ ಶಾಲೆ ಉಡುಪಿ, ಉಡುಪಿ ರನ್ನರ್ಸ್ ಕ್ಲಬ್ ಇವರ ಸಹಯೋಗದೊಂದಿಗೆ ಮಾನ್ಸೂನ್ ಕ್ರಾಸ್ ಕಂಟ್ರಿ ಮತ್ತು ಕಿಡ್ಸ್ ಅಥ್ಲೆಟಿಕ್ ಮೀಟ್ 2026 ಜೂ.7ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆಯಲಿದೆ ಎಂದು ಸಂಗಮೇಶ್ ಹಂಡಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒಟ್ಟು ಐದು ವಿಭಾಗಗಳಲ್ಲಿ ಕ್ರೀಡಾಕೂಟಗಳು ನಡೆಯಲಿದೆ. 8 ವರ್ಷದೊಳಗಿನ ವಯೋಮಿತಿ ಮಕ್ಕಳಿಗೆ 40 ಮೀಟರ್, 100 ಓಟ , 10 ವರ್ಷದೊಳಗಿನ ವಯೋಮಿತಿ 50 ಮೀಟರ್,100 ಮೀಟರ್ ಓಟದ ಸ್ಪರ್ಧೆ , 12 ವರ್ಷದೊಳಗಿನ ವಯೋಮಿತಿ 60 ಮೀಟರ್ ಓಟದ ಸ್ಪರ್ಧೆ ಹಾಗೂ 200 ಮೀಟರ್ ಓಟದ ಸ್ಪರ್ಧೆಗಳು ನಡೆಯಲಿದೆ. 14 ವರ್ಷದೊಳಗಿನ ವಯೋಮಿತಿ ಮಕ್ಕಳಿಗೆ 80 ಮೀಟರ್ ಓಟದ ಸ್ಪರ್ಧೆ ಹಾಗೂ 200 ಮೀಟರ್ ಓಟದ ಸ್ಪರ್ಧೆಯನ್ನು 16 ವರ್ಷದೊಳಗಿನ ವಯೋಮಿತಿ ಮಕ್ಕಳಿಗೆ 100, 400 ಮೀಟರ್ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅಲ್ಲದೇ 16ರಿಂದ 39 ವರ್ಷದೊಳಗಿನ ವಯೋಮಿತಿ ಹಾಗೂ 39 ವರ್ಷ ಮೇಲ್ಪಟ್ಟ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಮಾನ್ಸೂನ್ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆನ್ಲೈನ್ ನೋಂದಣಿ ಅಥವಾ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಬಹುದು. ಭಾಗವಹಿಸಿದ ಪ್ರತಿಯೊಬ್ಬರಿಗೂ ಜೆರ್ಸಿ, ಇ ಸರ್ಟಿಫಿಕೇಟ್ ನೀಡಲಾಗುವುದು.12 ವರ್ಷದೊಳಗಿನ ವಯೋಮಿತಿಯಿಂದ 39 ವರ್ಷ ಮೇಲ್ಪಟ್ಟ ವಿಭಾಗಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಮೆಡಲ್ ಇರಲಿದೆ.
ಜೂ.7ರಂದು ಬೆಳಗ್ಗೆ 5.30ಕ್ಕೆ ಕ್ರಾಸ್ ಕಂಟ್ರಿಯಲ್ಲಿ ಭಾಗವಹಿಸುವವರು ಹಾಜರಿರಬೇಕು. ಬೆಳಗ್ಗೆ 6.45 ಕ್ಕೆ ಓಟದ ಸ್ಪರ್ಧೆ ಆರಂಭವಾಗಲಿದೆ. ಬೆಳಗ್ಗೆ 7.30 ಕ್ಕೆ ಅಥ್ಲೀಟ್ ಮೀಟ್ ನಲ್ಲಿ ಭಾಗವಹಿಸುವ ಮಕ್ಕಳು ಹಾಜರಿರಬೇಕು. ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಈಗಾಗಲೇ 500 ಮಕ್ಕಳು ನೋಂದಣಿ ಮಾಡಿಕೊಂಡಿದ್ದು, ಎಲ್ಲಾ ವಿಭಾಗಗಳಲ್ಲಿ ಸೇರಿ ಒಟ್ಟು 1000 ಕ್ರೀಡಾಳುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಪೋದಾರ್ ಇಂಟರ್ ನ್ಯಾಶನಲ್ ಶಾಲಾ ಪ್ರಾಂಶುಪಾಲೆ ನೇತ್ರಾ ಹೆಚ್, ಉಡುಪಿ ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಅಮಿತಾ ಸಿ ರಾವ್, ಉಡುಪಿ ವಿದ್ಯಾರತ್ನ ನರ್ಸಿಂಗ್ ಕಾಲೇಜಿನ Vice principal ಎಂ.ಕೆ ರಮೇಶ್, ತಾಂತ್ರಿಕ ಮುಖ್ಯಸ್ಥ ಡಾ. ರಾಮಚಂದ್ರ ಪಾಟ್ಕರ್ ಮೊದಲಾದವರು ಉಪಸ್ಥಿತರಿದ್ದರು.