ಜುಗಾರಿ ಅಡ್ಡೆಗೆ ದಾಳಿ; 8 ಮಂದಿಯ ಬಂಧನ
Tuesday, February 10, 2026
ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್‌ಬೆಟ್ಟು ಎಂಬಲ್ಲಿ ಮನೆಯೊಂದರಲ್ಲಿ ಜುಗಾರಿ ನಿರತರಾಗಿದ್ದ 8 ಮಂದಿ ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಉಮ್ಮರ ಫಾರೂಕ್( 62), ಅಬ್ದುಲ್ ಅಜೀಜ್ (40), ಸತೀಶ ಎಸ್ ಪ್ರಭು (49), ಅಬ್ದುಲ್ ರಹಿಮಾನ್(49), ಸಮೀರ್(46), ಸುಲೇಮಾನ್(45), ಇರ್ಪಾನ್(26) ಹಾಗೂ ಚೇತಕ್(38) ಬಂಧಿತರು. ಇವರಿಂದ 22690 ರೂಪಾಯಿ ನಗದು, 10 ಪ್ಲಾಸ್ಟಿಕ್ ಕುರ್ಚಿ, 4 ಪ್ಲಾಸ್ಟಿಕ್ ಟೇಬಲ್ ಹಾಗೂ 9 ಮೊಬೈಲ್ ಪೋನ್‌ಗಳು ಹಾಗೂ ಇಸ್ಪೀಟ್ ಎಲೆಗಳನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣಾ ಪಿಎಸ್‌ಐ ಮುರುಳೀಧರ ನಾಯ್ಕ ಹಾಗೂ ಸಿಬ್ಬಂದಿಯವರು ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 23/26 U/s. 79,80 KP Act. 112 BNSರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.