-->
 ಎನ್‌ಎಸ್‌ಯುಐ ಉಪಾಧ್ಯಕ್ಷ ಶರತ್ ಕುಂದರ್ ಮೇಲೆ ಹಲ್ಲೆ ಪ್ರಕರಣ; 5 ಮಂದಿಯ ಬಂಧನ

ಎನ್‌ಎಸ್‌ಯುಐ ಉಪಾಧ್ಯಕ್ಷ ಶರತ್ ಕುಂದರ್ ಮೇಲೆ ಹಲ್ಲೆ ಪ್ರಕರಣ; 5 ಮಂದಿಯ ಬಂಧನ


ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ ಮತ್ತು ಬೈಲೂರು ಚಿಟ್ಪಾಡಿ ನಿವಾಸಿ ಶರತ್ ಕುಂದರ್ (25) ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಕುಂಜಿಬೆಟ್ಟು ನಿವಾಸಿ ಅಕ್ಷತ್ ಪೈ(27), ಉಡುಪಿ ಶಿವಳ್ಳಿ ಗ್ರಾಮದ ಸುಶಾಂತ್(25), ಉಡುಪಿ ಡಯಾನ ಟಾಕೀಸ್ ಹಿಂಭಾಗದ ನಿವಾಸಿ ರಮಾನಂದ ಪೈ(42), ಉಪ್ಪೂರು ನಿವಾಸಿ ಸಂತೋಷ್ ಕೊರಗ(38), ಅಲೆವೂರು ಗ್ರಾಮ ಮಣಿಪಾಲ ರಸ್ತೆ ನಿವಾಸಿ ಶಶಾಂಕ್ ನಾಯಕ್(25) ಬಂಧಿತರು. 

ಬಂಧಿತರಿOದ ಕೃತ್ಯಕ್ಕೆ  ಬಳಸಿದ 8 ಲಕ್ಷ ಮೌಲ್ಯದ ಹುಂಡೈ ವೆನ್ಯೂ ಕಾರು ಹಾಗೂ ಎರಡು ಮೊಬೈಲ್ ಪೋನ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. 

2026ರ ಜನವರಿ 30ರಂದು ರಾತ್ರಿ ಮಣಿಪಾಲ ಹೋಟೇಲ್‌ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು, ಬಳಿಕ ಪಿಪಿಸಿ ಕ್ರಾಸ್ ಬಳಿ ಶರತ್ ಕುಂದರ್ ಮೇಲೆ ದಾಳಿ ನಡೆಸಲಾಗಿತ್ತು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಪೊಲೀಸರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ನಿರ್ದೇಶನದಂತೆ ಉಡುಪಿ ನಗರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಮಾರ್ಗದರ್ಶನದಂತೆ ಉಡುಪಿ ನಗರ ಠಾಣಾ ಪಿಎಸ್‌ಐ ಭರತೇಶ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಜೀವನ್, ಪ್ರಸನ್ನ, ಚೇತನ್, ರವಿರಾಜ್, ಶಿವು ಹಾಗೂ ಮಲ್ಲಯ್ಯ ಅವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 


 

Ads on article

Advertise in articles 1

advertising articles 2

Advertise under the article