ಭಾರತೀಯ ದಂತ ವೈದ್ಯರ ಸಮಾವೇಶದಲ್ಲಿ ಡಾ. ಯು.ಬಿ ಶಬರಿ ನೇತೃತ್ವದ ತಂಡಕ್ಕೆ 6 ರಾಷ್ಟ್ರೀಯ ಪ್ರಶಸ್ತಿ
Tuesday, February 10, 2026
ಮಂಗಳೂರಿನಲ್ಲಿ ನಡೆದ 76 ನೇ ಭಾರತೀಯ ದಂತ ವೈದ್ಯರ ಸಮಾವೇಶದಲ್ಲಿ IDA ಉಡುಪಿಯ ಮೊದಲ ಮಹಿಳಾ ಅಧ್ಯಕ್ಷೆ ಡಾ. ಯು.ಬಿ ಶಬರಿ ನೇತೃತ್ವದ ತಂಡಕ್ಕೆ 6 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿತು.
ಡಾ. ಯು.ಬಿ ಶಬರಿ, ಡಾ ಅತುಲ್ ಯು.ಆರ್, ಕೆ. ಸುಜನ್ ಶೆಟ್ಟಿ, ಡಾ ಶ್ರೀಧರ್ ಶೆಟ್ಟಿ ಮತ್ತು ಡಾ ಪ್ರತೀಕ್ಷಾ ಶೆಟ್ಟಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ IDA ರಾಷ್ಟ್ರೀಯ ಅಧ್ಯಕ್ಷ ಡಾ ನಿತೇಶ್ ಬಾವ್ರೆ , ರಾಷ್ಟ್ರೀಯ ಕಾರ್ಯದರ್ಶಿ ಡಾ ಅಶೋಕ್ ಧೋಬ್ಲೆ, ಡಾ ಕದಮ್ ಮತ್ತು ಡಾ ಪ್ರಮೋದ್ ಶೆಟ್ಟಿ ಉಪಸ್ಥಿತರಿದ್ದರು .
