-->
 ಮುಂಡಗೋಡ ಪೊಲೀಸ್ ಠಾಣೆಯ ಎಸ್‌ಐ ಯಲ್ಲಾಲಿಂಗ ನಿಧನ

ಮುಂಡಗೋಡ ಪೊಲೀಸ್ ಠಾಣೆಯ ಎಸ್‌ಐ ಯಲ್ಲಾಲಿಂಗ ನಿಧನ


ಉತ್ತರ ಕನ್ನಡದ ಮುಂಡಗೋಡ ಪೊಲೀಸ್ ಠಾಣೆಯ ಸಬ್-ಇನ್‌ಸ್ಪೆಕ್ಟರ್  ಯಲ್ಲಾಲಿಂಗ ಕುನ್ನೂರು(33) ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. 

ಅನಾರೋಗ್ಯದಿಂದಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. 

ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿದ್ದ ಕಲಬುರಗಿ ಜೇವರ್ಗಿಯ ಯಲ್ಲಾಲಿಂಗ ಅನೇಕ ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ನಿಧನಕ್ಕೆ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article