ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ರಥಾರೋಹಣ
Tuesday, February 03, 2026
ಉಡುಪಿಯ ಕುಂಜಾರುಗಿರಿಯ ಐತಿಹಾಸಿಕ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ವರ್ಷಾವಧಿ ರಥೋತ್ಸವದ ರಥಾರೋಹಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ದೇವಿಗೆ ವಿಶೇಷ ಅಲಂಕಾರ, ಪೂಜೆ ಮತ್ತು ಬಲಿ ಉತ್ಸವಗಳನ್ನು ಏರ್ಪಡಿಸಲಾಗಿತ್ತು. ಸಹಸ್ರಾರು ಭಕ್ತರು ಪಾಲ್ಗೊಂಡು, ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಉಡುಪಿಯಿಂದ ಸುಮಾರು 11 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವು ಮಧ್ವಾಚಾರ್ಯರ ಜನ್ಮಸ್ಥಳವಾದ ಪಾಜಕದ ಸಮೀಪದಲ್ಲಿದೆ. ಇಲ್ಲಿನ ದೇವಿಯ ವಿಗ್ರಹವನ್ನು ಪರಶುರಾಮರು ಪ್ರತಿಷ್ಠಾಪಿಸಿದರು ಎಂಬ ನಂಬಿಕೆಯಿದೆ.ವಾರ್ಷಿಕವಾಗಿ ನವೆಂಬರ್ ತಿಂಗಳಲ್ಲಿ ದೀಪೋತ್ಸವವು ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.
