ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ್ ಪೂಜಾರಿ ನಿಧನ
Sunday, February 15, 2026
ಉಡುಪಿ ಜಿಲ್ಲೆಯ ಜಾರಿಗೆಕಟ್ಟೆ ಶ್ರೀ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿಗಳಾದ ದಿವಾಕರ್ ಪೂಜಾರಿ ಅವರು ಹೃದಯಾಘಾತದಿಂದ ಇಂದು (ಫೆ.15) ನಿಧನರಾಗಿದ್ದಾರೆ.
ಇವರು ಉಡುಪಿ ಜಿಲ್ಲೆಯ ಜಾರಿಗೆಕಟ್ಟೆ ಶ್ರೀ ಕೊರಗಜ್ಜ ಕ್ಷೇತ್ರದ ದೈವಸ್ಥಾನದ ಧರ್ಮದರ್ಶಿಗಳಾಗಿ ಅವರು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಕಾಸರಗೋಡಿನಲ್ಲಿ ದೈವ ದರ್ಶನಕ್ಕೆಂದು ತೆರಳಿದ ವೇಳೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಅವರ ಅಗಲುವಿಕೆಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.